ನ್ಯೂಸ್ ನಾಟೌಟ್ : ಧ್ವನಿ ಮತ್ತು ಬೆಳಕು ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ದುಡಿಯುತ್ತಿದ್ದ ಪುತ್ತೂರು ಮೂಲದ ಮೋಹನ್ ಅವರು ಇತ್ತೀಚೆಗೆ ದಿಢೀರ್ ಅನಾರೋಗ್ಯಕ್ಕೀಡಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರ ಪರಿಸ್ಥಿತಿ ಬಗ್ಗೆ ತಿಳಿದ ಸುಳ್ಯ ತಾಲೂಕು ಧ್ವನಿ ಮತ್ತು ಬೆಳಕು, ಶಾಮಿಯಾನ ಸಂಘದ ಸದಸ್ಯರು ಸೇರಿ ಸಂಗ್ರಹಿಸಿದ 50,111 ರೂಪಾಯಿಯ ಚೆಕ್ ನ್ನು ಮೋಹನ್ ಅವರ ಮನೆಯವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ಲೋಕನಾಥ್ ಎಸ್.ಪಿ, ಅಧ್ಯಕ್ಷ ಸತ್ಯಪ್ರಕಾಶ್ ಸುಳ್ಯ, ಜಿ.ಎ.ಮಹಮ್ಮದ್, ಸತೀಶ್ ಉಳುವಾರು, ಜಯಪ್ರಕಾಶ್ ಸುಳ್ಯ, ಸತೀಶ್ ಬಂಟೋಡಿ ಮತ್ತಿತರರು ಉಪಸ್ಥಿತರಿದ್ದರು.


















