ನ್ಯೂಸ್ ನಾಟೌಟ್: ದೇಶದ ರೈಲು ಪ್ರಯಾಣದಲ್ಲಿ ಭಾರಿ ವ್ಯತ್ಯಾಸವಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 250 ರೈಲುಗಳು ಒಂದೇ ದಿನ ಸಂಚಾರ ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರಿಗೆ ಭಾರಿ ಸಮಸ್ಯೆಯಾಗಿದೆ.
ದೇಶಾದ್ಯಂತ ಹಲವು ಕಡೆ ರೈಲು ರಿಪೇರಿ, ನಿರ್ವಹಣೆ, ರೈಲ್ವೆ ಟ್ರ್ಯಾಕ್ ಗಳ ದುರಸ್ಥಿ ಹಿನ್ನೆಲೆಯಲ್ಲಿ ನಾರ್ಥರ್ನ್ ರೈಲ್ವೆ, ವೆಸ್ಟರ್ನ್ ರೈಲ್ವೆ, ಈಸ್ಟರ್ನ್ ರೈಲ್ವೆ ಹಾಗೂ ಸೌಥರ್ನ್ ರೈಲ್ವೆ ಪ್ರಯಾಣದಲ್ಲಿ ವ್ಯತ್ಯಯವಾಗಿದೆ.


















