ನ್ಯೂಸ್ ನಾಟೌಟ್: ಕಹಿ ನೆನಪುಗಳ ಮರೆತು ಸಿಹಿ ನೆನಪುಗಳ ಸವಿಯೊಂದಿಗೆ ಹಳೆ ವರ್ಷಕ್ಕೆ ಗುಡ್ ಬೈ ಹೇಳಿ 2023ರ ಹೊಸ ವರ್ಷದ ಸ್ವಾಗತಕ್ಕೆ ಸರ್ವ ರೀತಿಯ ಸಿದ್ಧತೆ ನಡೆದಿದೆ. ಕೋವಿಡ್ ಮುನ್ನೆಚ್ಚರಿಕೆಯ ಜತೆಗೆ ಹೊಸ ವರ್ಷವನ್ನೂ ಸಂಭ್ರಮದಿಂದ ಸ್ವಾಗತಿಸಬೇಕಿದೆ. ಈ ನಡುವೆ ಹಳೆಯ ವರ್ಷಗಳಲ್ಲಿ ಏನಾಯಿತು ಅನ್ನುವುದನ್ನು ಒಂದೊಮ್ಮೆ ಹಿಂದಿರುಗಿ ನೋಡಿದರೆ ಹಲವಾರು ವಿಚಾರಗಳು 2022ರಲ್ಲಿ ನಡೆದಿದೆ. ಇದರಲ್ಲಿ ಆಯ್ದ ಪ್ರಮುಖ ವಿಚಾರಗಳು ನಿಮ್ಮ ಮುಂದಿದೆ ಓದಿ.
ಹಿಜಾಬ್ ವಿವಾದ ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಯಿತು. ಪರ ವಿರೋಧ ಚರ್ಚೆ ಎದುರಾಯಿತು. ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಅಂತಿಮವಾಗಿ ನ್ಯಾಯಾಲಯ ಸಮವಸ್ತ್ರ ಎಲ್ಲರಿಗೂ ಕಡ್ಡಾಯ ಅನ್ನುವ ಸರಕಾರದ ಆದೇಶವನ್ನು ಎತ್ತಿ ಹಿಡಿಯಿತು.
ಕಾಶ್ಮೀರದಲ್ಲಿ ಕಾಶ್ಮೀರ ಪಂಡಿತರ ಮೇಲಿನ ದೌರ್ಜನ್ಯ ಹತ್ಯೆಯ ಕುರಿತ ಸಿನಿಮಾ ‘ದಿ ಕಾಶ್ಮೀರ ಫೈಲ್ಸ್ ‘ ಭಾರಿ ಸದ್ದು ಮಾಡಿತ್ತು. ಮಾರ್ಚ್ 11ರಂದು ಈ ಸಿನಿಮಾ ಬಿಡುಗಡೆಯಾಗಿತ್ತು. ಪರ-ವಿರೋಧದದ ಚರ್ಚೆಗೆ ಕಾರಣವಾಗಿತ್ತು.
ಫೆ.24 ರಷ್ಯಾ – ಉಕ್ರೇನ್ ನಡುವಿನ ಯುದ್ಧ ಆರಂಭವಾಯಿತು. ರಷ್ಯಾ ಬಡಪಾಯಿ ಉಕ್ರೇನ್ ಮೇಲೆ ಎಗ್ಗಿಲ್ಲದೆ ದಾಳಿ ನಡೆಸಿತು. ಸಾವಿರಾರು ಮಂದಿ ಅಮಾಯಕರ ಹತ್ಯೆಗೆ ಕಾರಣವಾಯಿತು. ಈ ಯುದ್ಧ ಇಂದಿಗೂ ಮುಂದುವರಿದಿರುವುದು ವಿಷಾದನೀಯ.
ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆ ದ್ರೌಪದಿ ಮುರ್ಮು ದೇಶದ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಜು. 25ರಲ್ಲಿ ಇವರು ಅಧಿಕಾರ ಸ್ವೀಕರಿಸಿದರು. ಗಣ್ಯರು ಸೇರಿದಂತೆ ಹಲವಾರು ಮಂದಿ ಇವರಿಗೆ ಅಭಿನಂದನೆ ಸಲ್ಲಿಸಿದರು.
2022ರಲ್ಲಿ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ‘ಹರ್ ಘರ್ ತಿರಂಗ’ ಎಂಬ ಅಭಿಯಾನ ಆಚರಿಸುವಂತೆ ಪ್ರಧಾನಿ ಮೋದಿ ದೇಶವಾಸಿಗಳಿಗೆ ಮನವಿ ಮಾಡಿದ್ದರು. ಆ ದಿನಗಳಲ್ಲಿ ದೇಶಾದ್ಯಂತ ಜನರಿಗೆ ಧ್ವಜಗಳನ್ನು ಸಹ ವಿತರಿಸಲಾಯಿತು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಧ್ವಜಗಳನ್ನು ಖರೀದಿಸಿದರು. ಅಲ್ಲದೆ ದೇಶದ ಪ್ರತಿಯೊಂದು ಮನೆಮನೆಗಳಲ್ಲೂ ಆಗಸ್ಟ್ 15 ರಂದು ತ್ರಿವರ್ಣ ಧ್ವಜ ಹಾರಿಸಲಾಗಿತ್ತು. 500 ಕೋಟಿಗೂ ಹೆಚ್ಚು ಮೌಲ್ಯದ ಧ್ವಜಗಳನ್ನು ಜನರು ಖರೀದಿಸಿದ್ದರು.
ಗುಜರಾತ್ ನ ಮೋರ್ಬಿಯದಲ್ಲಿ ಕೇಬಲ್ ಸೇತುವೆ ಅ. 30 ರಂದು ಮುರಿದು ಬಿದ್ದಿತ್ತು. ಆ ಅಪಘಾತದಲ್ಲಿ ಕನಿಷ್ಠ 35 ಮಂದಿ ಮೃತಪಟ್ಟಿದ್ದಾರೆ. ಸೇತುವೆ ಕುಸಿದಾಗ ಅದರ ಮೇಲೆ ಸುಮಾರು 500 ಮಂದಿ ಇದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಪಕ್ಷವನ್ನು ಕಳೆದುಕೊಂಡಿದ್ದರು. ಹಾಗಾಗಿ ಅದನ್ನು ಮರಳಿ ಪಡೆಯಬೇಕೆನ್ನುವ ಉದ್ದೇಶದಿಂದ ಸೆ.7ರಂದು ಭಾರತದಲ್ಲಿ 150 ದಿನಗಳ ಕಾಲ ಈ ಭಾರತ್ ಜೋಡೋ ಯಾತ್ರೆ ಶುರು ಮಾಡಿದರು. ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದವರೆಗೆ 3,570 ಕಿ.ಮೀ ಉದ್ದದ ಈ ಯಾತ್ರೆಯು ಪಾದಯಾತ್ರೆಯಲ್ಲಿ ನಡೆದಿತ್ತು.
ಕಾಂತಾರ ಸಿನೆಮಾ ಸೆ. 30ರಂದು ಬಿಡುಗಡೆಗೊಂಡಿತ್ತು. ತುಳುನಾಡಿನ ಸಂಸ್ಕೃತಿಯನ್ನು ಒಳಗೊಂಡ ಸಿನಿಮಾವನ್ನು ಇಡೀ ದೇಶವೇ ಮೆಚ್ಚಿತ್ತು. ಅಷ್ಟೇ ಏಕೆ ವಿದೇಶದಲ್ಲೂ ಈ ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು. ರಿಷಭ್ ಶೆಟ್ಟಿಗೆ ವೃತ್ತಿ ಜೀವನಕ್ಕೆ ಬಹು ದೊಡ್ಡ ತಿರುವು ಕೊಟ್ಟ ಸಿನಿಮಾ ಎಂದೇ ಹೇಳಬಹುದು.
ಭಾರತದಲ್ಲಿ 5ಜಿ ಸೇವೆಗಳನ್ನು ಅ.1 ರಂದು ಆರಂಭಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 1 ರಂದು ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) 2022 ರ ಪ್ರಾರಂಭದಲ್ಲಿ 5G ನೆಟ್ ವರ್ಕ್ ಅನ್ನು ಅಧಿಕೃತವಾಗಿ ಪ್ರದರ್ಶನಗೊಳಿಸಿದರು.
ಅ.30ರಂದು ಕೊಡಗಿನಲ್ಲಿ ಭೂಕುಸಿತ ನಡೆದಿತ್ತು. ಭೂ ಕುಸಿತ, ಗುಡ್ಡ ಕುಸಿತದಿಂದ ಜನರು ಭಯಭೀತರಾಗಿದ್ದರು. ಆದ್ದರಿಂದ ಅಲ್ಲಿಯ ಜನರಿಗೆ ಭಾರಿ ನಷ್ಟ ಉಂಟು ಮಾಡಿತ್ತು. ಮನೆ ಬಿಟ್ಟು ಹೋಗೋ ಪರಿಸ್ಥಿತಿ ಬಂದಿತ್ತು. ಮನೆಯೊಳಗೆ ಎಲ್ಲಾ ನೀರು ಬಂದು ಮನೆಯಲ್ಲಿದ್ದ ವಸ್ತುಗಳು ಕೊಚ್ಚಿ ಹೋಗಿತ್ತು.
ಹೀರಾಬೇನ್ ನರೇಂದ್ರ ಮೋದಿಯವರ ತಾಯಿ. 100 ವರ್ಷಗಳ ಕಾಲ ಬದುಕಿದವರು. ಹೀರಾಬೇನ್ ರವರು ಡಿ.30 ರಂದು ನಿಧನ ಹೊಂದಿದರು. ಅತ್ಯಂತ ಸರಳವಾಗಿ ಮೋದಿ ಅವರ ಅಂತಿಮ ಸಂಸ್ಕಾರ ನೆರವೇರಿಸಿದರು.


















