ನ್ಯೂಸ್ ನಾಟೌಟ್ : ನಿರಂತರವಾಗಿ ಯೋಗ ಅಭ್ಯಾಸ ಮಾಡಿಕೊಂಡಿದ್ದ ಅನ್ವಿತಾ ಶೆಟ್ಟಿ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ದಾಖಲಿಸಿಕೊಂಡಿದ್ದಾರೆ.
ಯೋಗಪಟು ಅನ್ವಿತಾ ಶೆಟ್ಟಿ ಪಂಜದ ಪಲ್ಲೋಡಿಯ ಜಗನ್ನಾಥ ಶೆಟ್ಟಿ ಮತ್ತು ಜಯಲಕ್ಷ್ಮಿ ದಂಪತಿಗಳ ಪುತ್ರಿ. ಪ್ರಸ್ತುತ ಕಡಬದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆಕೆ ದಾವಣಗೆರೆಯ ಸಪ್ತಋಷಿ ಯೋಗಾಸನ ಕ್ರೀಡಾ ಅಕಾಡೆಮಿ ವಾರ್ಷಿಕೋತ್ಸವದಂದು ನಡೆದ ಯೋಗಸಾನ ಸ್ಪರ್ಧೆಯಲ್ಲಿ ಭಾಗವಹಿಸಿ, ವೃಕ್ಷಾಸನ, ಉತ್ಕಟಾಸನ, ಧನುರ್ ಆಸನ , ಸರ್ವಾಂಗಾಸನವನ್ನು ನಿರಂತರ 120 ಸೆಕೆಂಡುಗಳ ಕಾಲ ಪ್ರದರ್ಶಿಸಿದ್ದಾರೆ. ಅದರಲ್ಲಿ ‘ರಾಮದೂತಾಸನ’ ಎಂಬ ಯೋಗಾಸನವನ್ನು 1 ಗಂಟೆ 01 ನಿಮಿಷ 16 ಸೆಕೆಂಡ್ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ನಿರ್ಮಿಸಿ, ನೊಬೆಲ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅನ್ವಿತಾ ಪಂಜದ ‘ನಿರಂತರ ಯೋಗ ಕೇಂದ್ರ’ಎಂಬ ತರಗತಿಯಲ್ಲಿ ಯೋಗಾಭ್ಯಾಸವನ್ನು ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಅಲ್ಲದೆ ಆಕೆ ಚಿತ್ರ ಕಲಾ ಕ್ಷೇತ್ರದಲ್ಲಿಯೂ ಹಲವು ಪುರಸ್ಕಾರಗಳನ್ನು ಪಡೆದಿರುತ್ತಾರೆ. ಸತೀಶ್ ಪಂಜ ಚಿತ್ರಕಲೆ ಗುರುಗಳಾಗಿದ್ದಾರೆ.


















