ನ್ಯೂಸ್ ನಾಟೌಟ್: ಮೊದಲು ಅಣ್ಣ-ತಂಗಿ, ಆನಂತರ ಸ್ನೇಹಿತರು, ಇದೀಗ ಪ್ರೇಮಿಗಳು. ಎಲ್ಲಾದರೂ ಇಂಥಹದ್ದೊಂದು ಕಥೆ ಇದೆಯಾ? ಆದರೆ ನಟಿ ಪವಿತ್ರಾ ಲೋಕೇಶ್ ಮತ್ತು ನರೇಶ್ ಎಲ್ಲವನ್ನೂ ಮೀರಿ ಸಂಬಂಧಗಳನ್ನು ಬೇಕಾದಂತೆ ಸೃಷ್ಟಿಸಿಕೊಂಡಿದ್ದಾರೆ. ಇದೀಗ ಸತಿ-ಪತಿಗಳಾಗುವತ್ತಲೂ ಹೆಜ್ಜೆ ಇಟ್ಟಿದ್ದಾರೆ. ಇವರಿಬ್ಬರು ಹೊಸ ವರ್ಷಕ್ಕೆ ಲಿಪ್ -ಲಾಕ್ ಮಾಡಿಕೊಳ್ಳುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಈ ಫೋಟೋ, ವಿಡಿಯೋ ವೈರಲ್ ಆಗಿದೆ.
ಪವಿತ್ರಾ ಲೋಕೇಶ್ ತಮ್ಮ ಪತಿ ಸುಚ್ಚೇಂದ್ರ ಪ್ರಸಾದ್ ಹಾಗೂ ಬೆಳೆದು ನಿಂತ ಮಕ್ಕಳನ್ನು ಅರ್ಧದಲ್ಲಿ ಬಿಟ್ಟು ಕಳೆದೊಂದು ವರ್ಷಗಳಿಂದ ನರೇಶ್ ಜೊತೆ ಇದ್ದಾರೆ. 2022ರಲ್ಲಿ ಪವಿತ್ರಾ-ನರೇಶ್ ಜೋಡಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಜಾಲತಾಣದಲ್ಲಿ ಚೀಮಾರಿಗೂ ಒಳಗಾಗಿದ್ದರು.
ಪವಿತ್ರಾ-ನರೇಶ್ ಮೊದಲು ಲಾಡ್ಜ್ ನಲ್ಲಿ ನರೇಶ್ ಅವರ ಪತ್ನಿಯೆದುರಲ್ಲೇ ಸಿಕ್ಕಿ ಬಿದ್ದಿದ್ದರು. ನರೇಶ್ ಪತ್ನಿ ಪವಿತ್ರಾ ಲೋಕೇಶ್ ಮತ್ತು ನರೇಶ್ ಗೆ ಚಪ್ಪಲಿಯಲ್ಲಿ ಹೊಡೆಯಲು ಹೋಗಿದ್ದರು. ಈ ಘಟನೆಯು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಇದಾದ ನಂತರೂ ಈ ಜೋಡಿ ಹಲವು ಸಲ ಟೀಕೆಗಳ ಸುಳಿಗೆ ಸಿಲುಕಿತ್ತು. ಎಲ್ಲೆಡೆ ವಿರೋಧ ವ್ಯಕ್ತವಾಗಿದ್ದರೂ ಕೂಡ ಡೋಂಟ್ ಕ್ಯಾರ್ ಎನ್ನುವ ಹಾಗೆ ಬಿಂದಾಸ್ ಆಗಿ ಜೊತೆಯಲ್ಲೇ ಓಡಾಡುತ್ತಿದ್ದ ಜೋಡಿ . ಇತ್ತೀಚೆಗೆ ಮಹೇಶ್ ಬಾಬು ತಂದೆ ತೀರಿ ಹೋದ ಸಂದರ್ಭದಲ್ಲಿ ಪಬ್ಲಿಕ್ ಪ್ಲೇಸ್‌ನಲ್ಲಿ ಅಸಭ್ಯವಾಗಿ ವರ್ತಿಸುವ ಮೂಲಕ ಸುದ್ದಿಯಲ್ಲಿದ್ದರು. ಇದೀಗ ಈ ಜೋಡಿಗಳು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಇದೀಗ ವರ್ಷದ ಕೊನೆಯಲ್ಲಿ ಇಬ್ಬರೂ ಮದುವೆ ಬಗ್ಗೆ ಬಹಿರಂಗ ಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನರೇಶ್ ಶೇರ್ ಮಾಡಿರುವ ವಿಡಿಯೋದಲ್ಲಿ ತನ್ನ ಪ್ರಪಂಚಕ್ಕೆ ಪವಿತ್ರಾ ಲೋಕೇಶ್ ಅವರಿಗೆ ಸ್ವಾಗತ ಎಂದಿದ್ದಾರೆ. ಕೇಕ್ ಕತ್ತರಿಸಿ ಇಬ್ಬರೂ ಒಬ್ಬರಿಗೊಬ್ಬರು ತಿನ್ನಿಸಿ ಕೊನೆಯಲ್ಲಿ ಆ ಸಿಹಿಯನ್ನು ಲಿಪ್ ಕಿಸ್ ಮಾಡಿ ಹಂಚಿಕೊಂಡಿದ್ದಾರೆ. ವಿಡಿಯೋ ಕೊನೆಯಲ್ಲಿ ಸದ್ಯದಲ್ಲಿ ಇಬ್ಬರೂ ಮದುವೆಯಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಮುಂದೆ ಮದುವೆಯೋ ಅಥವಾ ದುರಂತ ಸಂಬಂಧ ಅಂತ್ಯವೋ ಅನ್ನುವುದನ್ನು ಕಾದು ನೋಡಬೇಕಿದೆ.


















