ನ್ಯೂಸ್ ನಾಟೌಟ್: ಭಾರತದ ಖ್ಯಾತ ಓಟಗಾರ್ತಿ ದ್ಯುತಿ ಚಂದ್ ಕಳೆದ ಮೂರು ವರ್ಷಗಳ ಹಿಂದೆ ತನ್ನ ಸ್ನೇಹಿತೆಯೊಂದಿಗೆ ಇರುವ ದೈಹಿಕ ಹಾಗೂ ಮಾನಸಿಕ ಸಂಬಂಧದ ಬಗ್ಗೆ ಹೇಳಿಕೊಂಡು ಭಾರಿ ಸುದ್ದಿಯಾಗಿದ್ದರು. ಇದೀಗ ದ್ಯುತಿ ಚಂದ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಈ ಸಲ ತನ್ನ ಜೀವದ ಗೆಳತಿ ಮೊನಾಲಿಸಾ ಜತೆಗಿರುವ ಫೋಟೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮದುವೆ ಕಾರ್ಯಕ್ರಮವೊಂದರಲ್ಲಿ ಇಬ್ಬರು ಜತೆಯಾಗಿ ಭಾಗಿಯಾಗಿದ್ದು ಅಲ್ಲಿ ಈ ಫೋಟೋ ತೆಗೆಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಫೋಟೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಫೋಟೋದ ಜತೆಗೆ ‘ಲವ್ ಈಸ್ ಲವ್’ ಎಂದು ಕ್ಯಾಪ್ಷನ್ ಬರೆದುಕೊಂಡಿರುವ ದ್ಯುತಿಗೆ ಭಾರಿ ಪ್ರಮಾಣದಲ್ಲಿ ಲೈಕ್ , ಕಾಮೆಂಟ್ಸ್ ಬಂದಿದೆ. ‘ಮೋರ್ ಪವರ್ ಅಂಡ್ ಲವ್’ ಎಂದು ಒಬ್ಬರು ಗಮನ ಸೆಳೆಯುವಂತಹ ಕಾಮೆಂಟ್ ಮಾಡಿದ್ದಾರೆ.


















