ನ್ಯೂಸ್ ನಾಟೌಟ್: ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು ಹೆಚ್ಚು ತಿನ್ನಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಅತಿಯಾದರೇ ಅಮೃತವೂ ವಿಷವಾಗುತ್ತದೆ ಅನ್ನುವ ಮಾತಿದೆ. ಇದು ಹಣ್ಣುಗಳಿಗೂ ಅನ್ವಯಿಸುತ್ತದೆ.
ಹಣ್ಣುಗಳು ಎಂದರೆ ನಮಗೆ ಸೇಬು, ಬಾಳೆಹಣ್ಣು, ಕಿತ್ತಾಳೆ, ದಾಳಿಂಬೆ ಮತ್ತು ದ್ರಾಕ್ಷಿ ಯಂತಹ ಹೆಸರುಗಳು ನೆನಪು ಬರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಡ್ರ್ಯಾಗನ್ ಹಣ್ಣಿನ ಮಹತ್ವ ಅರಿತ ಜನ ಖರೀದಿಗೆ ಮುಂದಾಗಿದ್ದಾರೆ. ಆದರೆ ಡ್ರ್ಯಾಗನ್ ಹಣ್ಣು ಆರೋಗ್ಯಕ್ಕೇನೋ ಒಳ್ಳೆಯದೇ, ಆದ್ರೆ ಅತಿಯಾಗಿ ಬಳಕೆ ಮಾಡಿದ್ರೆ ಡೇಂಜರಸ್.
ಡ್ರ್ಯಾಗನ್ ಫ್ರುಟ್ ನಿಮಗೆ ಗೊತ್ತಿದೆ ಅಲ್ವಾ? ಗುಲಾಬಿ ಬಣ್ಣದ ಹೊರ ಮೇಲ್ಮೇ ಹೊಂದಿರುವ, ಒಳಗಡೆ ಬಿಳಿ ಮತ್ತು ಕಪ್ಪು ಬಣ್ಣದ ಬೀಜ ಹೊಂದಿರುವ ಸುಂದಾರವಾದ ಹಣ್ಣಿದು. ಡ್ರ್ಯಾಗನ್ ಹಣ್ಣನ್ನು ಪಿತಾಯ ಎಂದೂ ಕರೆಯಲಾಗುತ್ತೆ. ಇದರ ವೈಜ್ಞಾನಿಕ ಹೆಸರು ಹಿಲೊಸೆರಾಸ್ ಉಂಡಸ್. ಇದು ಕಮಲವನ್ನು ಹೋಲುತ್ತದೆ, ಆದ್ದರಿಂದ ಇದನ್ನು ಸಂಸ್ಕೃತದಲ್ಲಿ ‘ಕಮಲಂ’ ಎಂದ ಕರೆಯುತ್ತಾರೆ. ಈ ಡ್ರ್ಯಾಗನ್ ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಕ್ಯಾರೊಟಿನಾಯ್ಡ್ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಬಿಳಿ ರಕ್ತ ಕಣಗಳನ್ನು ರಕ್ಷಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ದೇಹದಲ್ಲಿ ಹೆಚ್ಚಿಸುತ್ತದೆ. ಇದು ಸೋಂಕು ಅಥವಾ ಇತರೆ ಯಾವುದೇ ಕಾಯಿಲೆಗಳು ನಮ್ಮನ್ನು ಹಾನಿ ಮಾಡದಂತೆ ತಡೆಯುತ್ತದೆ. ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ಆಮ್ಲಜನಕದ ಅಗತ್ಯವಿದೆ. ಶಿಟ್ ತುಂಬಿದ ಆಮ್ಲಜನಕವನ್ನು ಪಡೆಯಬೇಕಾದರೆ ಕಬ್ಬಿಣವು ಹೇರಳವಾಗಿರಬೇಕು. ಡ್ರ್ಯಾಗನ್ ಹಣ್ಣು ತಿನ್ನುವುದರಿಂದ ಕಬ್ಬಿಣದ ಕೊರತೆಯನ್ನು ನಿವಾರಿಸಬಹುದು. ಇತರ ಎಲ್ಲಾ ಹಣ್ಣುಗಳಿಗೆ ಹೋಲಿಸಿದರೆ ಡ್ರ್ಯಾಗನ್ ಹಣ್ಣಿನಲ್ಲಿ ಮೆಗ್ನೀಸಿಯಮ್ ಅಧಿಕವಾಗಿರುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಡ್ರ್ಯಾಗನ್ ಹಣ್ಣುಗಳು ಅತ್ಯುತ್ತಮವಾಗಿದೆ. ಏಕೆಂದರೆ ಇದು ಹೆಚ್ಚು ಕ್ಯಾಲೊರಿಗಳನ್ನು ಹೊಂದಿರುವುದಿಲ್ಲ. ಈ ಹಣ್ಣಿನಲ್ಲಿನ ಬೀಜಗಳನ್ನು ಕೂಡ ಸೇವಿಸುವುದು ಉತ್ತಮ.
ಅತಿಸಾರದ ಸಮಸ್ಯೆ ಡ್ರ್ಯಾಗನ್ ಫ್ರುಟ್ ಸೇವನೆಯು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತೆ. ಇದರಲ್ಲಿರುವ ಪದಾರ್ಥಗಳು ಮಲವನ್ನು ಮೃದುವಾಗಿಸುತ್ತದೆ, ಇದು ಮಲವಿಸರ್ಜನೆ ಸುಲಭಗೊಳಿಸುತ್ತದೆ. ಆದರೆ, ಇದರ ಅತಿಯಾದ ಸೇವನೆಯು ಅತಿಸಾರದ ಸಮಸ್ಯೆಗಳನ್ನು ಉಂಟು ಮಾಡಬಹುದು, ಆದ್ದರಿಂದ ಅದನ್ನು ಹೆಚ್ಚು ಸೇವಿಸಬೇಡಿ.


















