ನ್ಯೂಸ್ ನಾಟೌಟ್: ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದರೆ ಅತ್ತ ಚುನಾವಣ ತಂತ್ರಗಾರ, ರಾಜಕೀಯ ನಾಯಕ- ಪ್ರಶಾಂತ್ ಕಿಶೋರ್ ಬಿಹಾರದಲ್ಲಿ ಪಾದಯಾತ್ರೆ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದಾರೆ.
ಈ ಪಾದಯಾತ್ರೆಯಲ್ಲಿ ಪ್ರಶಾಂತ್ ಕಿಶೋರ್ ನೀಡಿರುವ ಹೇಳಿಕೆ ಇದೀಗ ಬಿಹಾರ ಉಪ ಮುಖ್ಯಮಂತ್ರಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ಗೆ ಇರಿಸು ಮುರಿಸು ತಂದಿದೆ. ಲಾಲು ಪ್ರಸಾದ್ ಯಾದವ್ ಪುತ್ರ ಅನ್ನೋ ಕಾರಣಕ್ಕೆ 9ನೇ ಕ್ಲಾಸ್ ಓದಿದ ತೇಜಸ್ವಿ ಯಾದವ್ ಬಿಹಾರದ ಉಪಮುಖ್ಯಮಂತ್ರಿಯಾಗಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಧರ್ಮಪುರದಲ್ಲಿ ಆಯೋಜಿಸಿದ ಸಾರ್ವಜನಿಕ ಭಾಷಣ ಉದ್ದೇಶಿ ಮಾತನಾಡಿದ ಪ್ರಶಾಂತ್ ಕಿಶೋರ್, ಬಿಹಾರದ ಮೈತ್ರಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಜನಸಾಮಾನ್ಯರ ಮಕ್ಕಳು 9ನೇ ತರಗತಿ ಓದಿದಿದ್ದರೆ ಗುಮಾಸ್ತನಾಗಲು ಸಾಧ್ಯವಿಲ್ಲ. ಆದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಶಾಸಕ 9ನೇ ತರಗತಿ ಫೇಲ್ ಆಗಿದ್ದರೂ ಅತ್ಯುನ್ನತ ಹುದ್ದೆ ಸಿಗುತ್ತಿದೆ. ಈ ವ್ಯವಸ್ಥೆಯನ್ನು ಬದಲಾಯಿಸಬೇಕು. ಇನ್ನು ಎಷ್ಟು ದಿನ ರಾಜಕಾರಣಿಗಳ ಮಕ್ಕಳು ಯಾವುದೇ ಅರ್ಹತೆ ಇಲ್ಲದೆ ಹುದ್ದೆ ಅಲಂಕರಿಸುವ ಪದ್ಧತಿ ಇರಬೇಕು. ಇದನ್ನು ಜನಸಾಮಾನ್ಯರು ಬದಲಾಯಿಸಬೇಕು ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.


















