ನ್ಯೂಸ್ ನಾಟೌಟ್ : ಜಾಕ್ಲೇಟ್‌ನಲ್ಲಿ ಗಾಂಜಾ ಸೇರಿಸಿ ಮಾರಾಟ ಮಾಡುತ್ತಿದ್ದಾರೆ ಎನ್ನುವ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ರಾಯಚೂರಿನ ವಿವಿಧ ಕಡೆ ಅಬಕಾರಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 6 ತಂಡ ರಚಿಸಿದ ಆಬಕಾರಿ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದಾರೆ. ಸುತ್ತಮುತ್ತಲಿನ ಕಿರಾಣಿ ಅಂಗಡಿ, ಡಾನ್ ಡಬ್ಬಾ ಅಂಗಡಿಗಳಲ್ಲಿ ಪರಿಶೀಲನೆ ಮಾಡಿದ್ದಾರೆ. ಆದರೆ ರಾಯಚೂರು ನಗರದಲ್ಲಿ ಗಾಂಜಾ ಮಿಶ್ರಿತ ಚಾಕೋಲೆಟ್ ಪತ್ತೆಯಾಗಿಲ್ಲ. ಸಾರ್ವಜನಿಕರಲ್ಲಿ ಚಾಕೋಲೆಟ್ ಬಗ್ಗೆ ಮಾಹಿತಿ ಇದ್ದರೆ ಕೂಡಲೇ ಸಂಪರ್ಕಿಸಲು ಅಧಿಕಾರಿಗಳು ಮನವಿ ಮಾಡಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಗಾಂಜಾ ಪತ್ತೆಯಾಗಿದ್ದು ಈ ಚಾಕೋಲೆಟ್‌ಗಳನ್ನು ಅಬಕಾರಿ ಪೊಲೀಸರು ವಶವಡಿಸಿಕೊಂಡಿದ್ದಾರೆ.


















