ವರದಿ/ಫೋಟೋ: ಶರತ್ ಕೀಲಾರು ಸಂಪಾಜೆ
ನ್ಯೂಸ್ ನಾಟೌಟ್: ಬೃಹತ್ ಕಾಳಿಂಗ ಸರ್ಪವೊಂದು ಮನೆಯೊಂದರಲ್ಲಿ ಪ್ರತ್ಯಕ್ಷವಾಗಿ ಮನೆಮಂದಿಯೆಲ್ಲ ಗಾಬರಿಗೊಂಡು ತಕ್ಷಣ ಉರಗ ತಜ್ಞ ಅರಂಬೂರಿನ ಸ್ನೇಕ್ ಮೋಹನ್ ಬಂದು ಅದನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಘಟನೆ ಗುರುವಾರ ರಾತ್ರಿ ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಕಲ್ಲುಗುಂಡಿಯ ಸೊಸೈಟಿಯಲ್ಲಿ ಕಾರ್ಯ ನಿರ್ವಹಿಸುವ ಮಮ್ತಾಜ್ ಮಾಲೀಕತ್ವದಲ್ಲಿರುವ ಕೊಡಗು ಜಿಲ್ಲೆಯ ಕೊಯನಾಡು ಸಮೀಪ ಇರುವ ಚೆಡಾವು ಎಂಬಲ್ಲಿ ಎಂಟು ಅಡಿಗೂ ಹೆಚ್ಚು ಉದ್ದವಿದ್ದ ಕಾಳಿಂಗ ಕಾಣಿಸಿಕೊಂಡಿದ್ದ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸ್ಥಳೀಯರು ಆಗಮಿಸಿ ಉರಗ ತಜ್ಞರಿಗೆ ಮಾಹಿತಿ ನೀಡಿದರು. ಸಂಪಾಜೆ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಸ್ಥಳಕ್ಕೆ ಬಂದು ಅಗತ್ಯ ಕ್ರಮ ಕೈಗೊಂಡರು. ಉಳಿದಂತೆ ಕೇಶವ ಬಂಗ್ಲೆಗುಡ್ಡೆ ಸೇರಿದಂತೆ ಹಲವಾರು ಮಂದಿ ಸಹಕಾರ ನೀಡಿದರು.


















