ನ್ಯೂಸ್ ನಾಟೌಟ್: ಕಾಲೇಜ್ ಲೆಕ್ಚರರ್ ಅಂತ ಯುವತಿಗೆ ಸುಳ್ಳು ಹೇಳಿ ಕೆಲಸ ಕೊಡಿಸುವ ನೆಪದಲ್ಲಿ ಯುವತಿಯನ್ನು ಲಾಡ್ಜ್ ಗೆ ಬರುವಂತೆ ಮಾಡಿದ ಬಿಜೆಪಿ ಮುಖಂಡ, ಉದ್ಯಮಿ ಜಗನ್ನಾಥ್ ಶೆಟ್ಟಿಯ ನವರಂಗಿ ನಾಟಕ ಇದೀಗ ಬಟಾಬಯಲಾಗಿದೆ. ಕೆಲವು ದಿನಗಳ ಹಿಂದೆ ತನ್ನ ಮೇಲೆ ಹನಿಟ್ರ್ಯಾಪ್ ನಡೆದಿದೆ ಎಂದು ಜಗನ್ನಾಥ ಶೆಟ್ಟಿ ಪೊಲೀಸ್ ದೂರು ನೀಡಿದ್ದರು. ಲಕ್ಷಾಂತರ ರೂ. ಹಣ ಕಿತ್ತುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಆದರೆ ಇದೀಗ ಜಗನ್ನಾಥ ಶೆಟ್ಟಿಯ ಆಡಿಯೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಆತನೇ ಯುವತಿಯನ್ನು ಮಜಾ ಮಾಡುವುದಕ್ಕೆ ಲಾಡ್ಜ್ ಗೆ ಕರೆಸಿಕೊಂಡಿದ್ದ ಅನ್ನುವ ವಿಚಾರ ದೃಢಪಟ್ಟಿದೆ. ಇದರೊಂದಿಗೆ ಮೈಸೂರಿನ ದರ್ಶನ್ ಲಾಡ್ಜ್ ನಲ್ಲಿ ನಡೆದಿದ್ದ ಹನಿಟ್ರ್ಯಾಪ್ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದಂತಾಗಿದೆ.
ಚಿನ್ನದ ವ್ಯಾಪಾರಿ ಆಗಿದ್ದ ಜಗನ್ನಾಥ ಶೆಟ್ಟಿ ಯುವತಿಯನ್ನು ಬಲೆಗೆ ಬೀಳಿಸಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ನಡೆಸುವ ಪ್ಲಾನ್ ಮಾಡಿಕೊಂಡಿದ್ದ. ಅದಕ್ಕಾಗಿ ಮೈಸೂರಿನ ದರ್ಶನ್ ಲಾಡ್ಜ್ ಗೆ ಬರುವಂತೆ ಹೇಳಿದ್ದ. ಹುಡುಗಿಯ ಮುಂದೆ ತಾನು ಕಾಲೇಜು ಲೆಕ್ಚರ್ ಎಂದು ಜಗನ್ನಾಥ ಶೆಟ್ಟಿ ಬೊಗಳೆ ಬಿಟ್ಟಿದ್ದ. ಇಬ್ಬರು ಲೈಂಗಿಕ ಕ್ರಿಯೆಗೆ ಇನ್ನೇನು ಸಿದ್ಧವಾಗಬೇಕು ಅನ್ನುವಷ್ಟರಲ್ಲಿ ಸಲ್ಮಾ ಅಂಡ್ ಟೀಮ್ ದಾಳಿ ನಡೆಸಿ ಇಬ್ಬರಿಗೂ ಮನಬಂದಂತೆ ಥಳಿಸಿದ್ದಾರೆ. ಈ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ಘಟನೆಯ ಬಳಿಕ ಜಗನ್ನಾಥ ಶೆಟ್ಟಿ ಪೊಲೀಸ್ ಠಾಣೆಯಲ್ಲಿ ಕಟ್ಟುಕಥೆ ಕಟ್ಟಿದ್ದರು, ತನ್ನ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ. ಲಕ್ಷಾಂತರ ರೂ. ಹಣ ಕಿತ್ತುಕೊಂಡಿದ್ದಾರೆ ಎಂದು ಎಫ್‌ಐಆರ್ ನಲ್ಲಿ ತಿಳಿಸಿದ್ದಾರೆ. ಇದೀಗ ಎಫ್‌ಐಆರ್ ನಲ್ಲಿ ಜಗನ್ನಾಥ್ ಹೇಳಿರುವುದಕ್ಕೂ ಅಲ್ಲಿ ನಡೆದಿರುವುದಕ್ಕೂ ಒಂದಕ್ಕೊಂದು ಸಂಬಂಧವೇ ಕಾಣಿಸುತ್ತಿಲ್ಲ. ವಾಸ್ತವವಾಗಿ ಅಂದು ಅಲ್ಲಿ ನಡೆದಿದ್ದು ಏನು ಎಂಬ ವಿಚಾರದ ಬಗ್ಗೆ ಹೊರ ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


















