ನ್ಯೂಸ್ ನಾಟೌಟ್: ಉಜಿರ ಚಾರ್ಮಾಡಿ ರಸ್ತೆಯ ಅನುಗ್ರಹ ಶಾಲೆ ಬಳಿ ಇರುವ ಟಯರ್ ಅಂಗಡಿಗೆ ಇಂದು ( ಆ.೩೧ ಬುಧವಾರ) ಮಧ್ಯಾಹ್ನ ಬೆಂಕಿ ತಗಲಿದ್ದು ಸಂಪೂರ್ಣ ಸುಟ್ಟು ಕರಕಲಾಗಿದೆ.
ಪಕ್ಕದಲ್ಲಿ ಇದ್ದ ಹಾರ್ಡ್ ವೇರ್ ಅಂಗಡಿಗಳಿಗೂ ಬೆಂಕಿ ತಗುಲಿದೆ. ಚೌತಿ ಹಿನ್ನೆಲೆಯಲ್ಲಿ ಅಂಗಡಿಗೆ ಇವತ್ತು ರಜೆ ಇತ್ತು. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಆಗಮಿಸಿದ್ದು ಬೆಂಕಿ ನಂದಿಸುವ ಕಾರ್ಯ ಮಾಡುತಿದ್ದಾರೆ.


















