• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Wednesday, May 20, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ದಕ್ಷಿಣ ಕನ್ನಡದಲ್ಲಿ ಕ್ರೈಂ ರೇಟ್ ಹೆಚ್ಚಾಗೋಕೆ ಪೊಲೀಸ್ ಸಿಬ್ಬಂದಿ ಕೊರತೆಯೇ ಕಾರಣ..!

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
July 30, 2022
in ಕರಾವಳಿ
0 0
1
ದಕ್ಷಿಣ ಕನ್ನಡದಲ್ಲಿ ಕ್ರೈಂ ರೇಟ್ ಹೆಚ್ಚಾಗೋಕೆ ಪೊಲೀಸ್ ಸಿಬ್ಬಂದಿ ಕೊರತೆಯೇ ಕಾರಣ..!
Share on FacebookShare on Twitter

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಲ್ಲಿ ಮೂರು ಹೆಣಗಳು ಬಿದ್ದಿವೆ. ಕಾನೂನು ವ್ಯವಸ್ಥೆಯನ್ನೇ ಕೋಮು ದಳ್ಳುರಿ ಬುಡಮೇಲಾಗಿಸಿದೆ. ಮಸೂದ್, ಪ್ರವೀಣ್, ಫಾಜಿಲ್ ಎಂಬ ಅಮಾಯಕ ಯುವಕರು ಬಲಿಯಾಗಿ ಬಿಟ್ಟಿದ್ದಾರೆ.  

ಹೌದು, ಕರಾವಳಿ ಯಾವಾಗಲೂ ಸೂಕ್ಷ್ಮ ಪ್ರದೇಶ. ಇಲ್ಲಿ ಧರ್ಮದ ಹೆಸರಿನಲ್ಲಿ ಯಾವಾಗ ಎಲ್ಲಿ ಏನು ಬೇಕಾದರೂ ಸಂಭವಿಸಬಹುದು. ಸಣ್ಣ ವಿಚಾರದಿಂದ ಹತ್ತಿಕೊಂಡ ಕಿಡಿ ದೊಡ್ಡ ಮಟ್ಟಕ್ಕೆ ತಲುಪಿಬಿಡುತ್ತೆ. ಅದರಲ್ಲೂ ಚುನಾವಣೆ ಬಂತೆಂದರೆ ಮುಗಿದೇ ಬಿಟ್ಟಿತ್ತು. ಕರಾವಳಿಯಲ್ಲಿ ಕೋಮುದ್ವೇಷಕ್ಕೆ ರಕ್ತಪಾತವೇ ಆಗಿಬಿಡುತ್ತೆ. ಅದು ಬಿಜೆಪಿ ಇರಲಿ ಅಥವಾ ಕಾಂಗ್ರೆಸ್ ಸರಕಾರವೇ ಇರಲಿ. ಅಮಾಯಕರ ಜೀವ ಬಲಿಯಂತೂ ಗ್ಯಾರಂಟಿ.

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >

ಇಷ್ಟೆಲ್ಲ ಆದ್ರೂ ಸರಕಾರ ಮಾತ್ರ ಇನ್ನೂ ಸುಮ್ಮನೆ ಕುಳಿತಿದ್ಯಾ ಅನಿಸ್ತಿದೆ. ಇಷ್ಟು ವರ್ಷ ಆದ್ರೂ ಕರಾವಳಿ ಭಾಗದ ಅದೆಷ್ಟೋ ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿಯ ಕೊರತೆ ಇದೆ. ರಾಜ್ಯ ಸರಕಾರಕ್ಕೆ ಇದುವರೆಗೆ ಪೊಲೀಸ್ ಇಲಾಖೆಯ ನೇಮಕಾತಿಯನ್ನು ಭರ್ತಿ ಮಾಡುವುದಕ್ಕೆ ಏಕೆ ಸಾಧ್ಯವಾಗಿಲ್ಲ? ಕರಾವಳಿಗೆ ಹೆಚ್ಚಿನ ಪೊಲೀಸ್ ಫೋರ್ಸ್ ಕೊಡುವುದಕ್ಕೆ ಏಕೆ ಆಗಿಲ್ಲ? ಈ ನಿರ್ಲಕ್ಷ್ಯದ ಕಾರಣದಿಂದಲೇ ಕರಾವಳಿಯಲ್ಲಿ ಇಂದು ಅಮಾಯಕ ಜೀವಗಳು ಬಲಿಯಾಗುತ್ತಿವೆ.

ಠಾಣೆಗಳಲ್ಲಿ ಸಿಬ್ಬಂದಿ ಇಲ್ಲ..!

ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿಯ ಕೊರತೆಯಿದೆ. ಎರಡೂ ಪಾಳಿಯಲ್ಲಿ ಕೆಲಸ ಮಾಡಲು ಸಿಬ್ಬಂದಿಯಿಲ್ಲ. ಹೆಚ್ಚಿನ ಪೊಲೀಸರು ಎರಡೂ ಶಿಫ್ಟ್‌ಗಳಲ್ಲಿ ರಾತ್ರಿ ಹಗಲೆನ್ನದೆ ಕೆಲಸ ಮಾಡುತ್ತಿದ್ದಾರೆ. ಉದಾಹರಣೆ ನೀಡುವುದಾದರೆ ದಕ್ಷಿಣ ಕನ್ನಡದ ಒಂದು ಪೊಲೀಸ್‌ ಠಾಣೆಯಲ್ಲಿ ಇಪ್ಪತ್ತೈದು ಗ್ರಾಮಕ್ಕೆ ಇರೋದು ಕೇವಲ ೪೦ ಪೊಲೀಸರು. ಅದರಲ್ಲೂ ಎರಡು ಶಿಫ್ಟ್‌ ಮಾಡಿ ನೋಡುವುದಾದರೆ ಕೆಲವರು ರಜೆ, ಇನ್ನೂ ಕೆಲವರು ಸೆಕೆಂಡ್ ಶಿಫ್ಟ್‌ ನಿಂದಾಗಿ ಮೊದಲ ಶಿಫ್ಟ್‌ ನಲ್ಲಿ ಡ್ಯೂಟಿಯಲ್ಲಿ ಇರುವ ಪೊಲೀಸರ ಸಂಖ್ಯೆ ಕೇವಲ ಹತ್ತು..! ಇಂದು ಜಗತ್ತು ಅತೀ ವೇಗದಲ್ಲಿ ಬೆಳೆಯುತ್ತಿದೆ. ಜನಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಪೊಲೀಸ್ ಪಡೆ ಮಾತ್ರ ಇದ್ದಂತೆ ಇದೆ. ಸರಿಯಾದ ಸಮಯಕ್ಕೆ ನೇಮಕಾತಿ ಆಗುತ್ತಿಲ್ಲ. ಅದರಲ್ಲೂ ಪಿಎಸ್ಐ ನಂತಹ ಹಗರಣಗಳ ಸರಮಾಲೆ ಸರಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಫಜಿಲ್ ಹತ್ಯೆ ವೇಳೆ ಸಿಎಂ ಡ್ಯೂಟಿ

ಪ್ರವೀಣ್ ಮನೆಗೆ ಸಾಂತ್ವಾನ ಹೇಳುವುದಕ್ಕೆ ಸಿಎಂ ಬೊಮ್ಮಾಯಿ, ಗೃಹ ಸಚಿವ ಅರಗ ಸೇರಿದಂತೆ ವಿವಿಧ ನಾಯಕರು ಮೊನ್ನೆಯಷ್ಟೇ ಬಂದಿದ್ದರು. ಈ ವೇಳೆ ಇಡೀ ಮಂಗಳೂರಿನ ಪೊಲೀಸ್ ಫೋರ್ಸ್ ರಾಜಕಾರಣಿಗಳ ಭದ್ರತೆ ನೀಡುವುದರಲ್ಲಿ ತಲ್ಲೀನವಾಗಿತ್ತು. ಅದೇ ದಿನ ಸುರತ್ಕಲ್ ನಲ್ಲಿ ಸಮಯ ಸಾಧಿಸಿ ದುಷ್ಕರ್ಮಿಗಳು ಫಜಲ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದರು. ಮುಖ್ಯವಾಗಿ ಮಸೂದ್, ಪ್ರವೀಣ್ ಹತ್ಯೆ ನಡೆದು ನಿಗಿನಿಗಿ ಕೆಂಡದಂತಿದ್ದ ಸಮಯದಲ್ಲಿ ಮಂಗಳೂರಿನ ಸುರತ್ಕಲ್ ನಲ್ಲಿ ಪೊಲೀಸ್ ವ್ಯವಸ್ಥೆ ಏಕೆ ಬಿಗಿಯಾಗಿರಲಿಲ್ಲ? ಇದು ನಿರ್ಲಕ್ಷ್ಯವಲ್ಲವೆ? ಅನ್ನುವುದನ್ನು ಪ್ರಶ್ನಿಸಬೇಕಿದೆ.

ತ್ವರಿತ ನೇಮಕಾತಿ ಆಗದೆ 24 ವರ್ಷ..!

ಪೊಲೀಸ್ ಸಿಬ್ಬಂದಿ ಕೊರತೆ ದೇಶದ ಎಲ್ಲಾ ರಾಜ್ಯಗಳ ದೊಡ್ಡ ಸಮಸ್ಯೆ. ಜನಸಂಖ್ಯೆಗೆ ಅನುಗುಣವಾಗಿ ಸೂಕ್ತ ಪ್ರಮಾಣದಲ್ಲಿ ಪೊಲೀಸರು ಇಲ್ಲದಿರುವುದೇ ಅಪರಾಧ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಂಜೂರಾದ ಸುಮಾರು 1.08 ಲಕ್ಷ ಹುದ್ದೆಗಳ ಪೈಕಿ 88 ಸಾವಿರ ಸಿಬ್ಬಂದಿ‌ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನುಳಿದ 23 ಸಾವಿರ ಹುದ್ದೆಗಳು ಖಾಲಿ ಇವೆ. ರಾಜ್ಯ ಸರಕಾರ ಹಂತ ಹಂತವಾಗಿ ಸಿಬ್ಬಂದಿ ನೇಮಕಾತಿ ನಡೆಸುತ್ತಿದೆಯಾದರೂ ತ್ವರಿತ ನೇಮಕಾತಿಯ ಪ್ರಕ್ರಿಯೆ ವಿಳಂಬವಾಗುತ್ತಿದೆ.

1 ಲಕ್ಷ ಜನರಿಗೆ ಎಷ್ಟು ಪೊಲೀಸ್‌ ?

2019 ರ ರಾಷ್ಟ್ರೀಯ ಮಾನದಂಡದ ಪ್ರಕಾರ, ದೇಶದ ಒಂದು ಲಕ್ಷ ಜನರಿಗೆ 198 ಪೊಲೀಸರಿರಬೇಕಾದ ಜಾಗದಲ್ಲಿ 158 ಪೊಲೀಸರಿದ್ದಾರೆ. ಕರ್ನಾಟಕದಲ್ಲಿ ಒಂದು ಲಕ್ಷ ಜನರಿಗೆ 182 ಪೊಲೀಸರು ಇರಬೇಕು. ಆದರೆ, 139 ಸಿಬ್ಬಂದಿ‌ ಮಾತ್ರ ಇದ್ದಾರೆ. ಗುಜರಾತ್​ನಲ್ಲಿ 161ರ ಜಾಗದಲ್ಲಿ 131, ಹರಿಯಾಣದಲ್ಲಿ 226 ಮಂದಿ ಬದಲು 163 ಪೊಲೀಸರಿದ್ದಾರೆ. ಮಿಜೋರಾಂ 1,016 ಪೋಸ್ಟ್​ಗೆ 771, ರಾಜಸ್ತಾನದಲ್ಲಿ 145 ಪೈಕಿ 128 ಹಾಗೂ ಪಶ್ಚಿಮ ಬಂಗಾಳದಲ್ಲಿ 158 ಸಿಬ್ಬಂದಿ‌‌ ಮಂಜೂರಾದ ಹುದ್ದೆಗಳ ಪೈಕಿ ಕೇವ‌ಲ 100 ಜನರಿದ್ದಾರೆ. ಇದೇ ರೀತಿ ದೇಶದ ಬಹುತೇಕ ರಾಜ್ಯಗಳಲ್ಲಿ‌ ಪೊಲೀಸ್ ಅನುಪಾತದಲ್ಲಿ ಏರಿಳಿತ ಇರುವುದನ್ನು ಕಾಣಬಹುದು. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಡಿಜಿಪಿಯಾಗಿದ್ದ ಬಾಲಕೃಷ್ಣ ರಾವ್ ಅವರ ಅವಧಿಯಲ್ಲಿ ಗ್ರಾಮೀಣ, ನಗರ,‌ ಮಹಾನಗರ‌ ಮೂರು ಭಾಗಗಳಾಗಿ ವಿಂಗಡಿಸಿ ಯಾವ ಠಾಣೆಗಳಲ್ಲಿ ಎಷ್ಟು ಮಂದಿ‌‌ ಪೊಲೀಸರಿರಬೇಕು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ‌‌‌ ಪೊಲೀಸರನ್ನು ನೇಮಕ ಮಾಡಬೇಕೆಂದು‌ ಹೇಳಿ ಅಂದಿನ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ‌ಇದಕ್ಕೆ ಬಂಗಾರಪ್ಪ ಅನುಮೋದಿಸಿದ್ದರು.‌ ಇವೆಲ್ಲ ಆಗಿ 24 ವರ್ಷ ಗತಿಸಿದರೂ ಸಿಬ್ಬಂದಿ‌ ನೇಮಕಾತಿಯಲ್ಲಿ ಅಮೂಲಾಗ್ರ ಬದಲಾವಣೆಯಾಗಿಲ್ಲ. ಜನಸಂಖ್ಯೆ ಹೆಚ್ಚಳವಾದರೂ ಪೊಲೀಸ್ ಸಿಬ್ಬಂದಿ ನೇಮಕದಲ್ಲಿ ಹೆಚ್ಚಳವಾಗಿಲ್ಲ. ಇದನ್ನು ರಾಜ್ಯ ಸರಕಾರ ಪರಿಶೀಲನೆ‌ ನಡೆಸಬೇಕು ನಿವೃತ ಡಿಜಿಪಿ ಶಂಕರ ಬಿದರಿ ಹೇಳುತ್ತಾರೆ.

ಪೊಲೀಸ್ ಠಾಣೆಗಳ ಮೇಲಿದೆ ಒತ್ತಡ

ದೇಶದಲ್ಲಿ ಡಿಜಿಟಲೀಕರಣ ಹೆಚ್ಚಾಗುತ್ತಿರುವ ಪರಿಣಾಮ ಹಳ್ಳಿಗಳು ಪಟ್ಟಣಗಳಾಗುತ್ತಿವೆ. ಪಟ್ಟಣ‌ ನಗರವಾಗಿ, ನಗರ ಮಹಾನಗರವಾಗಿ ಬದಲಾಗುತ್ತಿವೆ. ಹಳ್ಳಿಗಳಿಂದ ಮಹಾನಗರ ಪ್ರದೇಶಗಳಿಗೆ ಉದ್ಯೋಗ ಅರಸಿ ವಲಸೆ ಬರುವವರ ಪ್ರಮಾಣ ಅಧಿಕವಾಗಿದೆ. ದಿನೇ ದಿನೆ ಆರ್ಥಿಕ, ಉದ್ಯಮ ಹಾಗೂ ಕೈಗಾರಿಕೆಗಳು ಹಿಗ್ಗಿಸಿಕೊಳ್ಳುತ್ತಿವೆ.‌ ಕೃಷಿ ಪ್ರದೇಶಗಳು ವಸತಿ‌‌ ಪ್ರದೇಶಗಳಾಗಿ ಪರಿವರ್ತನೆಯಾಗಿವೆ. ‌‌ಇದೆಲ್ಲದರ ಬೆಳವಣಿಗೆಯಿಂದ‌ ಪೊಲೀಸ್ ಠಾಣೆಗಳ‌ ಮೇಲೆ‌‌ ಒತ್ತಡ ಬೀಳುತ್ತಿದೆ. ಇನ್ನೊಂದೆಡೆ ಕೋಮುಗಲಭೆ ಹಾಗೂ ಭಯೋತ್ಪಾದನೆ ಕೃತ್ಯಗಳ‌ ಜೊತೆಗೆ ಅಪರಾಧ ಜಗತ್ತಿನಲ್ಲಿ ಹೊಸ ಹೊಸ ರೀತಿಯಲ್ಲಿ ವಂಚನೆ, ಕೌಟುಂಬಿಕ‌ ಕ್ರೌರ್ಯ, ಸೈಬರ್ ಕ್ರೈಂ, ಹೀಗೆ ನಿತ್ಯ‌ ನೂತನ ಅಪರಾಧ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಹಲವು ಸವಾಲುಗಳ‌ ನಡುವೆ ಪೊಲೀಸರು ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆಯಿದೆ.

Tags: causelowmainpoliceratio
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ಬೆಳ್ಳಾರೆ: ವ್ಯಕ್ತಿಗೆ ಬೆತ್ತಲೆ ಮಾಡಿ ಥಳಿಸಿದ್ರಾ..? ಆರೋಪ ನಿರಾಕರಿಸಿದ ಪೊಲೀಸರು, ಠಾಣೆಗೆ ಎಸ್.ಪಿ.ಭೇಟಿ

ಜಿ.ಪಂ. ಸದಸ್ಯನಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ

Comments 1

  1. Anil says:
    4 years ago

    Police sankye jasthi maadi prayojana illa daksha policegalu beku
    Karya kshamathe irbeku

    Reply

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In