ನ್ಯೂಸ್ ನಾಟೌಟ್ : ಫಾಜಿಲ್ ಹತ್ಯೆ ಪ್ರಕರಣದ ತನಿಖೆ ತೀವ್ರಗೊಂಡಿದೆ.
ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರಿನ ಬಲಾಢ್ಯ ಹಿಂದೂ ಸಂಘಟನೆಯೊಂದರ ನಾಲ್ವರು ಕಾರ್ಯಕರ್ತರನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಪೊಲೀಸರು ಇನ್ನೂ ಯಾವುದನ್ನು ಖಚಿತಪಡಿಸಿಲ್ಲ.
ಪೊಲೀಸ್ ವಿಚಾರಣೆ ನಡೆಯುತ್ತಿದ್ದು ಇದರ ಹಿಂದೆ ಇನ್ನಷ್ಟು ಮಂದಿ ಇದ್ದಾರೆಯೇ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ. ಸದ್ಯ ೨೧ ಮಂದಿಯ ಬಂಧಿಸಲಾಗಿದೆ. ಇದರಲ್ಲಿ ಆರು ಮಂದಿ ಅಪರಾಧಿಗಳು ಎನ್ನುವುದು ಖಚಿತಪಡಿಸಿದೆ. ಪೊಲೀಸ್ ವಶದಲ್ಲಿ ಇರುವ ಇವರ ಬಂಧನಕ್ಕೆ ಸಿದ್ಧತೆ ನಡೆದಿದೆ ಎನ್ನಲಾಗಿದೆ. ಪ್ರಕರಣದಲ್ಲಿ ಭಾಗಿಯಾದವರು ಎಲ್ಲರೂ ಸ್ಥಳೀಯರು ಎನ್ನಲಾಗಿದೆ. ಕೋಮು ದ್ವೇಷಕ್ಕೆ ಕೊಲೆ ಆಗಿದೆ ಎನ್ನುವುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.
ಮೂಲಗಳ ಪ್ರಕಾರ ಪೊಲೀಸರು ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಿ ಆರೋಪಿಗಳ ಮಾಹಿತಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯಾದ ಬೆನ್ನಲ್ಲೇ ಮಂಗಳೂರಿನ ಸುರತ್ಕಲ್ ಪೋಲಿಸ್ ಠಾಣಾ ವ್ಯಾಪ್ತಿಯ ಬಟ್ಟೆ ಅಂಗಡಿಯೊಂದರ ಮುಂದೆ ಎರಡು ದಿನದ ಹಿಂದೆ ಫಾಝಿಲ್ ಮಂಗಳಪೇಟೆಯನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದಿದ್ದರು.



















Brainless Police try to close the case by implicating some Hindu boys colouring it as communal act. The way the killers chased Fazil is evident that it was preplanned for some enmity. If it was a retaliatory for Praveen killing the killers would not have targeted one person. Retaliatory should have taken place at Puttur area and not at Suratkal. Police are
Unable to identify the killers of Praveen. Inefficient system. They are fit to beat the innocent citizens. Fazil killing was definitely a targeted one and planned long back.