ನ್ಯೂಸ್ ನಾಟೌಟ್: ಚೆಂಬು, ಗೂನಡ್ಕ ಸೇರಿದಂತೆ ದಕ್ಷಿಣ ಕನ್ನಡ ಕೆಲವು ಕಡೆಗೆ ಇದೀಗ 8.15 ಕ್ಕೆ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ತಿಳಿದು ಬಂದಿದೆ. ಜನರು ಮತ್ತೆ ಮತ್ತೆ ಭಯದಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆರಡು ಸಲ ಸದ್ದು ಆಗಿದ್ದರೆ ಹೋಗಲಿ ಎಂದು ಸುಮ್ಮನಿರಬಹುದು. ಆದರೆ ಪ್ರತಿ ದಿನ ಸದ್ದು ಆಗುತ್ತಿರುವುದರ ಹಿಂದಿನ ವಾಸ್ತವ ವಿಚಾರ ಏನು ಅನ್ನುವುದರ ಬಗ್ಗೆ ಸೂಕ್ತ ಅಧ್ಯಯನ ನಡೆಯಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.










