ನ್ಯೂಸ್ ನಾಟೌಟ್: ಮಳೆಗಾಲದಲ್ಲಿ ನೀರು ಉಕ್ಕಿ ಹರಿಯುತ್ತಿದ್ದರೂ ಲೆಕ್ಕಿಸದೆ ನದಿಗೆ ಇಳಿದ ಐವರು ಬಾಲಕರಲ್ಲಿ ಇಬ್ಬರು ಕೊಚ್ಚಿಕೊಂಡು ಹೋಗಿರುವ ಘಟನೆ ಬಂಟ್ವಾಳ ಉಳ್ಳಾಲ ತಾಲೂಕಿನ ಸಜಿಪಪಡು ಗ್ರಾಮದ ನೇತ್ರಾವತಿ ನದಿ ಸಮೀಪದ ತಲೆಮೊಗರು ಎಂಬಲ್ಲಿ ನಡೆದಿದೆ. ನೀರು ಪಾಲಾಗಿದ್ದ ಇಬ್ಬರಲ್ಲಿ ಒಬ್ಬನನ್ನು ರಕ್ಷಿಸಲಾಗಿದೆ. ಇನ್ನೊಬ್ಬ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ರುಕ್ಮಯ ಸಪಲ್ಯ ಎಂಬವರ ಪುತ್ರ ಅಶ್ವಿತ್ (19) ಎಂಬಾತ ನೀರು ಪಾಲಾಗಿ ನಾಪತ್ತೆಯಾದ ಬಾಲಕ. ಸಜೀಪಪಡು ಪೆರ್ವ ನಿವಾಸಿ ಹರ್ಷಿತ್ ಎಂಬ ಬಾಲಕನನ್ನು ಸ್ಥಳೀಯರು ರಕ್ಷಿಸಿದ್ದು ಅಸ್ವಸ್ಥಗೊಂಡಿದ್ದ ಆತನನ್ನು ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಶಾಲ್, ವಿಕೇಶ್, ಲಿಖಿತ್ ಎಂಬವರು ಸುರಕ್ಷಿತವಾಗಿ ದಡ ಸೇರಿದ್ದಾರೆ.


















