ನ್ಯೂಸ್ ನಾಟೌಟ್: ಸಂಪಾಜೆಯಲ್ಲಿ ಸಂಜೆ 4.40 ಕ್ಕೆ ಮತ್ತೆ ಭೂಕಂಪದ ಅನುಭವ ಆಗಿದೆ ಎನ್ನಲಾಗಿದೆ. ಈ ಬಗ್ಗೆ ಸಂಪಾಜೆ ಗ್ರಾಮ ಪಂಚಾಯತ್ ವಾಟ್ಸಪ್ ಗ್ರೂಪ್ ನಲ್ಲಿ ಅಧ್ಯಕ್ಷ ಜಿ.ಕೆ. ಹಮೀದ್ ಅವರು ಪ್ರಕಟಿಸಿದ್ದು ಹಲವರಿಗೆ ಲಘು ಕಂಪನದ ಅನುಭವ ಆಗಿದೆ. ಕೆಲವರು ದೂರವಾಣಿ ಮೂಲಕ ತಮಗಾದ ಅನುಭವ ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಮಂಗಳವಾರ ಬಗ್ಗೆ 7.45 ಕ್ಕೆ ಭೂಮಿ ಭಾರಿ ಸದ್ದಿನೊಂದಿಗೆ ಕಂಪಿಸಿತ್ತು. ಸಂಪಾಜೆ ಗೂನಡ್ಕ ಸುತ್ತಮುತ್ತಲಿನ ಕೆಲವು ಭಾಗಗಳಲ್ಲಿ ಭಾರಿ ಕಂಪನವಾಗಿತ್ತು. ರಿಕ್ಟರ್ ಮಾಪಕದಲ್ಲಿ 3 ರ ತೀವ್ರತೆ ಹೊಂದಿದ್ದ ಕಂಪನದಿಂದ ಜನರು ಭಯಭೀತರಾಗಿದ್ದಾರೆ. ಇದೀಗ ಮತ್ತೆ ಮತ್ತೆ ಭೂಮಿ ಕಂಪಿಸುತ್ತಿರುವುದರಿಂದ ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಗಿದೆ.










