ನ್ಯೂಸ್ ನಾಟೌಟ್: ಮೆನೆಯ ಹಿಂಬದಿಯಲ್ಲಿದ್ದ ಶೌಚಾಲಯಕ್ಕೆ ತೆರಳಿದ್ದ ವೇಳೆ ಮಹಿಳೆಯ ಚಿನ್ನದ ಸರವನ್ನು ಎಳೆದು ಪರಾರಿಯಾಗಿರುವ ಘಟನೆ ಸೋಣಂಗೇರಿ ಸಮೀಪ ನಡೆದಿದೆ. ನಿನ್ನೆ ರಾತ್ರಿ ಘಟನೆ ನಡೆದಿದ್ದು ಸ್ಥಳೀಯರು ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಏನಿದು ಘಟನೆ?
ಸೋಣಂಗೇರಿ ಸುಳ್ಯ ರಸ್ತೆಬದಿ ಹೊಸಗದ್ದೆ ಬಳಿ ಹರೀಶ್ ಮನೆಯಲ್ಲಿ ಅವರ ಪತ್ನಿ ನಿರ್ಮಿತ ನಿನ್ನೆ ರಾತ್ರಿ 1.15 ರ ವೇಳೆ ಗೆ ಮನೆಯ ಹಿಂಬದಿ ಶೌಚಾಲಯಕ್ಕೆ ತೆರಳಿ ಹಿಂದುರಿಗುತ್ತಿರುವಾಗ ಮನೆಯ ಹಿಂಬದಿಯಿಂದ ಅಪರಿಚಿತ ವ್ಯಕ್ತಿಯೊಬ್ಬ ಬಂದಿದ್ದಾನೆ. ನಿರ್ಮಿತ ರ ಕುತ್ತಿಗೆ ಹಿಸುಕಿ ಕುತ್ತಿಗೆಯಲ್ಲಿದ್ದ ೫ ಪವನ್ ನ ಚಿನ್ನದ ಸರವನ್ನು ಎಳೆದು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


















