ನ್ಯೂಸ್ ನಾಟೌಟ್: ಇಲ್ಲೊಂದು ಕೋಣ ತಂಟೆಗೆ ಬಂದವರನ್ನು ಅಟ್ಟಾಡಿಸಿ ಸುದ್ದಿಯಾಗಿದೆ. ಯಾರು ಅದಕ್ಕೆ ಬೈತಾರೋ ಅಂಥಹವರನ್ನು ಊರಿಡೀ ಅಟ್ಟಾಡಿಸುತ್ತದೆ. ಹೌದು, ಇಂತಹ ಕೋಣ ಇರುವುದು ಕೊಪ್ಪಳ ತಾಲೂಕಿನ ಬಂಡಿಹರ್ಲಾಪುರ ಗ್ರಾಮದಲ್ಲಿ. ವಿಶೇಷವೆಂದರೆ ಇದು ಶ್ರೀ ಕಂಟೆಮ್ಮ ದುರ್ಗಾ ದೇವಿ ಹರಕೆಯ ಕೋಣವಾಗಿದೆ. ಯಾರಾದರೂ ಅದಕ್ಕೆ ಬೈದ್ರೆ, ಹೊಡೆದ್ರೆ ಅಥವಾ ಕಿರಿಕ್ ಮಾಡಿದರೆ ಅದು ಸುಮ್ಮನೆ ಬಿಡುವುದಿಲ್ಲ. ಹೀಗಾಗಿ ಈ ಕೋಣದ ತಂಟೆಗೆ ಯಾರೂ ಹೋಗುವ ದುಸ್ಸಾಹಕ್ಕೆ ಹೈ ಹಾಕುವುದಿಲ್ಲ ಎನ್ನುವುದು ಗ್ರಾಮಸ್ಥರ ಮಾತಾಗಿದೆ.










