ನ್ಯೂಸ್ ನಾಟೌಟ್: ಭಾರಿ ಸದ್ದಿನೊಂದಿಗೆ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ.
ಕೊಡಗು ಗಡಿಭಾಗವಾದ ಸಂಪಾಜೆ, ಊರುಬೈಲು, ಗೂನಡ್ಕ, ಅರಂತೋಡಿನಲ್ಲಿ ಭಾರಿ ಪ್ರಮಾಣದ ಸದ್ದಿನೊಂದಿಗೆ ಕಂಪನದ ಅನುಭವ ಆಗಿದೆ. ಉಳಿದಂತೆ ಸುಳ್ಯ ತಾಲೂಕಿನ ಅಜ್ಜಾವರದಲ್ಲೂ ಭೂಮಿ ಕಂಪಿಸಿದ ಅನುಭವ ಇದಾಗಿದೆ. ಬೆಳಗ್ಗೆ ೭.೪೩ಕ್ಕೆ ಕಂಪನವಾಗಿದ್ದ ಜನ ಭಯಭೀತರಾಗಿದ್ದಾರೆ. ಶನಿವಾರವಷ್ಟೇ ಭೂಕಂಪನವಾಗಿ ಜನ ಚೇತರಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಕಂಪನವಾಗಿರುವುದು ಜನರ ಆತಂಕವನ್ನು ಹೆಚ್ಚಿಸಿದೆ. ಕೊಡಗಿನ ಭಾಗಮಂಡಲ ಹಾಗೂ ಕರಿಕೆ ಸೇರಿದಂತೆ ವಿವಿಧ ಕಡೆ ಕಂಪನದ ಅನುಭವ ಆಗಿದೆ ಎಂದು ವರದಿಯಾಗಿದೆ.


















