ನ್ಯೂಸ್ ನಾಟೌಟ್ : ಕರ್ನಾಟಕದಲ್ಲಿರುವ ಅದೆಷ್ಟೂ ಮಂದಿ ಕನ್ನಡ ಗೊತ್ತಿದರೂ ಕನ್ನಡ ಮಾತನಾಡುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ಅಂತಹುದರಲ್ಲಿ ಇಲ್ಲೊಬ್ಬರು ದೂರದ ಕೆನಡಾದ ಸಂಸತ್ತಿನಲ್ಲಿ ಕನ್ನಡದಲ್ಲೇ ಭಾಷಣ ಮಾಡಿ 5 ಕೋಟಿ ಕನ್ನಡಿಗರ ಮೈ ಮನ ರೋಮಾಂಚನಗೊಳಿಸಿದ್ದಾರೆ. ಕೆನಡಾದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವ ಕರ್ನಾಟಕದ ಚಂದ್ರ ಆರ್ಯ ಅವರು ಕೆನಡಾ ಪಾರ್ಲಿಮೆಂಟ್ ನಲ್ಲಿ ಕನ್ನಡದಲ್ಲೇ ಭಾಷಣ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಚಂದ್ರ ಆರ್ಯ ಅವರು ತಾವು ಕೆನಡಾ ಸಂಸತ್ತಿನಲ್ಲಿ ಆಡಿದ ಭಾಷಣದ ವಿಡಿಯೋ ತುಣುಕನ್ನು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತು ಟ್ವಟರ್ ನಲ್ಲಿ ಬರೆದುಕೊಂಡಿರುವ ಚಂದ್ರ ಆರ್ಯ ನಾನು ನನ್ನ ಮಾತೃಭಾಷೆ ಕನ್ನಡವನ್ನು ಕೆನಡಾ ಸಂಸತ್ತಿನಲ್ಲಿ ಮಾತನಾಡಿದೆ. ಇದೊಂದು ಬಹುದೊಡ್ಡ ಇತಿಹಾಸ ಹೊಂದಿರುವ ಸಂದರವಾದ ಭಾಷೆ. ಸುಮಾರು 5 ಕೋಟಿಗೂ ಅಧಿಕ ಮಂದಿ ಈ ಭಾಷೆಯನ್ನು ಮಾತನಾಡುತ್ತಾರೆ. ಭಾರತದಿಂದ ಹೊರಗೆ ವಿದೇಶಿ ನೆಲದ ಸಂಸತ್ತಿನಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡಲಾಗಿದೆ ಎಂದು ತಮ್ಮ ಬರಹದಲ್ಲಿ ವಿವರಿಸಿದ್ದಾರೆ.


















