ನ್ಯೂಸ್ ನಾಟೌಟ್: ಲಕ್ಷಾಂತರ ರೂ. ಹಣ ತೆತ್ತು ಶಾಲೆಗೆ ಸೇರಿಸಿದ ಶ್ರೀಮಂತ ಅಪ್ಪ -ಅಮ್ಮಂದಿರ ಮರ್ಯಾದೆಯನ್ನು ಹೆಣ್ಣು ಮಕ್ಕಳು ಬೀದಿಯಲ್ಲಿ ಹರಾಜು ಹಾಕಿದ ಘಟನೆ ನಡೆದಿದೆ.
ಅದು ಬೆಂಗಳೂರಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆ. ಅಲ್ಲಿ ಎಲ್ ಕೆಜಿ ಓದುವುದಕ್ಕೂ ಒಂದು ಮಗುವಿಗೆ ಎರಡು ಲಕ್ಷಕ್ಕೂ ಅಧಿಕ ಫೀಸ್ ಕಟ್ಟಬೇಕು. ದುಬಾರಿ ಬೆಲೆಯ ಕಾರಿನಲ್ಲಿ ಮಕ್ಕಳಿಗೆ ಡ್ರಾಪ್ ಕೊಡಲು ಬರುವ ಪೋಷಕರು. ಐಎಎಸ್ ಅಧಿಕಾರಿಗಳು, ರಾಜಕಾರಣಿ, ಉದ್ಯಮಿಗಳ ಮಕ್ಕಳು ಮಾತ್ರ ಆ ಶಾಲೆಯಲ್ಲಿ ಓದುತ್ತಾರೆ. ಅತ್ಯಂತ ಶಿಸ್ತಿನ ಶಾಲೆ ಎಂದು ಕರೆಯಿಸಿಕೊಳ್ಳುವ ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯ ವಿದ್ಯಾರ್ಥಿನಿಯರು ಇಂದು ಬೀದಿ ಕಾಳಗ ನಡೆಸಿದ್ದಾರೆ. ಕೈಯಲ್ಲಿ ಸ್ಟಿಕ್ ಹಿಡಿದುಕೊಂಡು ಹೊಡಿಮಗ..ಹೊಡಿ ಮಗ ಅನ್ನುತ್ತಿದ್ದಾರೆ.
ಪರಸ್ಪರ ಕೂದಲನ್ನು ಎಳೆದಾಡಿಕೊಂಡು ಮತ್ತು ಹಿಂಸಾತ್ಮಕವಾಗಿ ತಳ್ಳುವುದು ಕಂಡುಬಂದಿದೆ. ಈ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಯಾವ ಕಾರಣಕ್ಕೆ ಘಟನೆ ನಡೆದಿದೆ ಅನ್ನುವುದು ತಿಳಿದು ಬಂದಿಲ್ಲ. ಶಾಲಾ ಆಡಳಿತ ಮಂಡಳಿಯೂ ಇದುವರೆಗೆ ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ.



















ನಾನು ತಿಳಿದಂತೆ ಶಿಸ್ತು ಶ್ರೀಮಂತ ಮನೆತನದ ಮಕ್ಕಳ ಲ್ಲಿ ಇಲ್ಲ.ಬಿಷಪ್ ಕಾಟನ್ ಶಾಲೆಯ ಮಕ್ಕಳಿಂದ ಸರ್ಕಾರಿ ಶಾಲೆಗಳ ಮಕ್ಕಳ ಲ್ಲಿ ಶಿಸ್ತು ಜಾಸ್ತಿ.