ಸುಬ್ರಹ್ಮಣ್ಯ: ಇಲ್ಲಿನ ವಲ್ಲೀಶ ಸಭಾ ಭವನದ ಎದುರು ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದು ಘಟನೆಯಲ್ಲಿ ಸ್ಕೂಟಿ ಚಲಾಯಿಸುತ್ತಿದ್ದ ನಿವೃತ್ತ ಎ.ಎಸ್. ಐ, ಎ. ಪೆರ್ಗಡೆ ಗೌಡ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಹಿಂದಿನಿಂದ ಡಿಕ್ಕಿ ಹೊಡೆದ ಕಾರು ಸುಮಾರು ದೂರ ಅವರನ್ನು ಎಳೆದುಕೊಂಡು ಹೋಗಿದ್ದು, ತಲೆಗೆ ಗಾಯವಾಗಿದ್ದು ದೇಹದ ಹಲವು ಭಾಗಗಳಿಗೆ ಗಾಯವಾಗಿರುವುದಾಗಿ ತಿಳಿದುಬಂದಿದೆ. ಅವರನ್ನು ಈಗಾಗಲೇ ಕಡಬ ಆಸ್ಪತ್ರೆಗೆ ಸಾಗಿಸಲಾಗಿದ್ದು ಮೃತ ಪಟ್ಟಿರುವುದನ್ನು ವೈದ್ಯರು ದೃಡೀಕರಿಸಿದ್ದಾರೆ ಎಂದು ತಿಳಿದುಬಂದಿದೆ.


















