ನೆಲ್ಯಾಡಿ: ಮುಸ್ಲಿಂ ಆಟೋ ಚಾಲಕನೊಬ್ಬ ಹಿಂದೂ ಯುವತಿಯನ್ನು ಕರೆದುಕೊಂಡು ತನ್ನ ರಿಕ್ಷಾದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಗುಂಡ್ಯದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿದ್ದರು. ಇಬ್ಬರನ್ನು ಪೊಲೀಸರಿಗೆ ಹಿಡಿದೊಪ್ಪಿಸಿದ್ದರು. ಪೊಲೀಸರಿಗೆ ಒಪ್ಪಿಸುವ ಮೊದಲು ಸಂಘಟನೆಯವರು ತನಗೆ ಯದ್ವಾತದ್ವಾ ಹಲ್ಲೆ ಮಾಡಿರುವುದಾಗಿ ಆಟೋ ಚಾಲಕ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸರು ಕಡಬ ತಾಲೂಕಿನ ಅನಿಲ ನಿವಾಸಿ ಬಾಲಚಂದ್ರ ಹಾಗೂ ರಂಜಿತ್ ಎಂಬವರನ್ನು ವಶಕ್ಕೆ ತೆಗೆದುಕೊಂಡು ಕೇಸ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.










