ಬಳಂಜ: ನಾಲ್ಕೂರು ಗ್ರಾಮದ ತೋಟದಪಲ್ಕೆ ಎಂಬಲ್ಲಿ ದಾಮೋದರ ಹೆಗ್ಡೆ ಎಂಬವರ ಮನೆಗೆ ಸಿಡಿಲು ಬಡಿದು ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾಗಿ ಹೋಗಿದೆ. ಎ. 25 ರಂದು ಸುರಿದ ಗಾಳಿ ಮಳೆ ಗೆ ಸಿಡಿಲು ಬಡಿದು ಮನೆಯ ಗೋ ಡೆ ಮತ್ತು ಕರೆಂಟ್ ಮೀಟರ್, ಮನೆಯ ಒಳಗಿನ ಕರೆಂಟ್ ಲೈನ್ ಸುಟ್ಟು ಹೋಗಿ ಸುಮಾರು ಅಂದಾಜು 35000 ನಷ್ಟ ಆಗಿದೆ ಎಂದು ಮನೆಯವರು ತಿಳಿಸಿದರು. ಸಿಡಿಲು ಬಡಿಯುವಾಗ ಮನೆಯಲ್ಲಿ ಮನೆ ಸದಸ್ಯರಿದ್ದು ಅಪಾಯದಿಂದ ಪಾರಾಗಿದ್ದಾರೆ.










