ಆಲಂಕಾರು: ಇಲ್ಲಿನ ದುರ್ಗಾಂಬಾ ಪ್ರೌಡಶಾಲಾ ವಿದ್ಯಾರ್ಥಿನಿ ಆಲಂಕಾರು ಗ್ರಾಮದ ಕೊಂಡಾಡಿ ಜಗದೀಶ ಕುಂಬಾರರವರ ಪುತ್ರಿ ದೀಕ್ಷಾ (14) ಅನಾರೋಗ್ಯದಿಂದ ಫೆ.24ರಂದು ನಿಧನರಾಗಿದ್ದಾರೆ.
ಕಡಬ ತಾಲೂಕಿನ ಆಲಂಕಾರು ದುರ್ಗಾಂಬಾ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ದೀಕ್ಷಾರವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಮನೆಯಲ್ಲಿ ಚಿಕಿತ್ಸೆ ಮುಂದುವರಿಸುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೇ ಫೆ.24ರಂದು ನಿಧನರಾಗಿದ್ದಾರೆ.


















