ಹೆಬ್ರಿ : ಶಿವಪುರ ಗ್ರಾಮದ ಭಟ್ರಾಡಿ ಹೊಳೆಗೆ ಈಜಲು ಹೋದ ವಿದ್ಯಾರ್ಥಿಗಳಲ್ಲಿ ಮೂವರು ನೀರುಪಾಲಾಗಿದ್ದಾರೆ.
ಹಿರಿಯಡ್ಕ ಪ.ಪೂ.ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಪಾಡಿಗಾರ ಮೂಲದ ಸುದರ್ಶನ್(17) ,ಕಿರಣ್ (17)ಹಾಗೂ ಹಿರಿಯಡ್ಕ ಸೋನಿಶ್ (16) ಮೃತಪಟ್ಟವರು ಎಂದು ತಿಳಿದು ಬಂದಿದೆ.
ಮೂವರ ಮೃತದೇಹವನ್ನು ಮೇಲಕ್ಕೆತ್ತಲಾಗಿದ್ದು, ಸ್ಥಳಕ್ಕೆ ಹೆಬ್ರಿ ಠಾಣೆಯ ಪೊಲೀಸರು, ತಹಶೀಲ್ದಾರ್ ಅವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


















