ಉಡುಪಿ: ಶ್ರೀ ಕೃಷ್ಣನ ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾಗಿದ್ದೇನೆ ಎಂದು ಉಡುಪಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಉಡುಪಿಯಲ್ಲಿ ಜಿಲ್ಲಾಡಳಿತದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷ್ಣನ ದರ್ಶನಕ್ಕಾಗಿ ಸಣ್ಣವನಿದ್ದಾಗ ಉಡುಪಿಗೆ ಆಗಮಿಸುತ್ತಿದ್ದೆ. ಆದರೆ, ಕಳೆದ ಬಾರಿ ಎಲ್ಲರೂ ಸೇರಿ ಉಡುಪಿ ಜಿಲ್ಲೆ ಉಸ್ತುವಾರಿ ನೀಡಿದರು. ಜಿಲ್ಲೆಯ ಜನ, ಶಾಸಕರು ಪ್ರೀತಿ ವಿಶ್ವಾಸ ತೋರಿಸಿದ್ದಾರೆ. ಉಡುಪಿಯಲ್ಲಿ ಕೆಲಸ ಮಾಡಲು ತುಂಬಾ ಖುಷಿಯಾಗುತ್ತದೆ. ಉಡುಪಿಯ ಜನ ಹೃದಯ ವೈಷಾಲ್ಯತೆ ಉಳ್ಳವರಾಗಿದ್ದಾರೆ. ಜಿಲ್ಲೆಗೆ ಹಾಗೂ ಕಷ್ಟಕ್ಕೆ ಏನು ಬೇಕು ಎನ್ನುವುದನ್ನು ಮಾತ್ರ ಉಡುಪಿಯ ಜನರು ಕೇಳುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.










