ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಲಿಬಾನಿ ಸಂಸ್ಕೃತಿಯನ್ನು ನಡೆಯಲು ಬಿಡುವುದಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಕಬಕದಲ್ಲಿ ಸ್ವಾತಂತ್ರ್ಯ ರಥಕ್ಕೆ ಅಡ್ಡಿ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಥದಲ್ಲಿ ಮಹಾನ್ ಪುರುಷರಾದ ಸಂಗೊಳ್ಳಿ ರಾಯಣ್ಣ,ವೀರ ಸಾವರ್ಕರ್ ಭಾವಚಿತ್ರ ಹಾಕಲಾಗಿದ್ದು ರಥದಲ್ಲಿನ ಮಹಾನ್ ಪುರುಷರ ಭಾವಚಿತ್ರ ತೆಗೆದು ಇತರರ ಫೊಟೋ ಅಳವಡಿಸಬೇಕೆಂದು ಕೆಲವು ಕಿಡಿಗೇಡಿಗಳು ಸ್ವಾತಂತ್ರ್ಯದ ರಥ ತಡೆಹಿಡಿದು, ದಾಂಧಲೆ ನಡೆಸಿದ್ದಾರೆ. ತಾಲಿಬಾನಿ ಸಂಸ್ಕೃತಿಯನ್ನು ದ.ಕ.ದಲ್ಲಿ ನಡೆಯಲು ಬಿಡುವುದಿಲ್ಲ ಎಂದಿದ್ದಾರೆ. ಇನ್ನು ಕೃತ್ಯ ಮಾಡಿದವರನ್ನು ಶೀಘ್ರವಾಗಿ ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಗೃಹ ಸಚಿವರನ್ನು ಆಗ್ರಹಿಸಿದ್ದೇನೆ ಎಂದರು.










