ಕುಂದಾಪುರ: ರಸ್ತೆ ಬದಿಯಲ್ಲಿ ಮಲಗಿದ್ದ ಜಾನುವಾರುಗಳನ್ನು ದುರುಳರು ಕದ್ದೊಯ್ದ ಘಟನೆ ಕುಂದಾಪುರದ ಯಡ್ತರೆಯಲ್ಲಿ ಬುಧವಾರ ಮುಂಜಾನೆ ಬೆಳಕಿಗೆ ಬಂದಿದೆ.
ರಸ್ತೆ ಬದಿಯಲ್ಲಿ ಮಲಗಿದ್ದ ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಪಿಕಪ್ ವಾಹನದಲ್ಲಿ ಸಾಗಾಟ ಮಾಡಲಾಗಿದೆ. ಇದನ್ನು ಶಿರೂರು ಕಡೆಗೆ ಕೆಲಸದ ನಿಮಿತ್ತ ಹೋಗುತಿದ್ದ ದಿನೇಶ್ ಪೂಜಾರಿ ಎಂಬವರು ತಕ್ಷಣವೇ ಶಿರೂರು ಚೆಕ್ ಪೋಸ್ಟ್ ನ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.
ಪಿಕಪ್ ವಾಹನದಲ್ಲಿ ದನಗಳನ್ನು ಖದೀಮರು ಕದ್ದೊಯ್ಯುತ್ತಿದ್ದರು. ಯಡ್ತಡಿ ಯಿಂದ ಶಿರೂರು ಕಡೆಗೆ ಸಂಚರಿಸಿದ್ದ ಪಿಕಪ್ ವಾಹನ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಹಿಂಬಾಲಿಸಿಕೊಂಡು ಹೋದರೂ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಬಳಿಕ ಶಿರೂರು ಟೋಲ್ ತನಕ ವಾಹನವನ್ನು ದಿನೇಶ್ ಪುಜಾರಿ ಮತ್ತು ಅವರ ಸ್ನೇಹಿತರು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










