
ಬೆಂಗಳೂರು: 75 ನೇ ವರ್ಷದ ಸ್ವಾತಂತ್ರ್ಯ ಸಂಭ್ರಮಕ್ಕೆ ದೇಶವೇ ಸಿದ್ಧವಾಗಿದೆ. ಅಂತೆಯೇ ನಮ್ಮ ಬೆಂಗಳೂರು ಕೂಡ ಕಲರ್ ಫುಲ್ ಆಗಿ ಸಜ್ಜಾಗಿದೆ. ಶನಿವಾರ ರಾತ್ರಿ ಬೆಂಗಳೂರಿನಲ್ಲಿರುವ ಶಕ್ತಿ ಕೇಂದ್ರ ವಿಧಾನ ಸೌಧ ಕೇಸರಿ, ಬಿಳಿ, ಹಸಿರಿನ ಸಂಗಮದಿಂದ ಕಾಣಿಸಿಕೊಂಡಿರುವ ದೃಶ್ಯ ಎಲ್ಲರ ಗಮನವನ್ನು ಸೆಳೆಯಿತು. ಎರಡು ದಿನಗಳ ಹಿಂದೆಯೇ ಲೈಟಿಂಗ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಇಡೀ ವಿಧಾನಸೌಧಕ್ಕೆ ತ್ರಿವರ್ಣ ಲೈಟಿಂಗ್ಸ್ ಅಳವಡಿಸಿರುವುದು ವಿಶೇಷ.










