ಬೆಂಗಳೂರು: ಅಂಬರೀಷ್ ಅವರು ಯಾರಿಗೂ ತಿಳಿಯದಂತೆ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿಯವರಿಗೆ 2014ರಲ್ಲಿ 2 ಲಕ್ಷ ರೂ. ನೀಡಿದ್ದರು ಎಂದು ಸಂಸದೆ ಸುಮಲತಾ ಮಾಡಿರುವ ಟ್ವೀಟ್ ವೈರಲ್ ಆಗಿದೆ. 2014ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ – ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಧೋನಿ ಆಟ ಕಂಡು ಖುಷಿಯಾಗಿ ಈ ಕೊಡುಗೆ ನೀಡಿದ್ದು, ಅದು ಈಗ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ. ಅಂಬರೀಷ್ ಕಲಿಯುಗದ ಕರ್ಣ ಏನೇ ಕೇಳಿದರೂ ಕೊಡುವ ಮನಸ್ಸು ಉಳ್ಳ ಅಪರೂಪದ ವ್ಯಕ್ತಿಯಾಗಿದ್ದರು ಎಂದು ಇದೇ ವೇಳೆ ಸುಮಲತಾ ಹೇಳಿದ್ದರು.
https://twitter.com/sumalathaA/status/1428913674559770628?ref_src=twsrc%5Etfw%7Ctwcamp%5Etweetembed%7Ctwterm%5E1428913674559770628%7Ctwgr%5E%7Ctwcon%5Es1_c10&ref_url=https%3A%2F%2Fpublish.twitter.com%2F%3Fquery%3Dhttps3A2F2Ftwitter.com2FsumalathaA2Fstatus2F1428913674559770628widget%3DTweet


















