ನ್ಯೂಸ್ ನಾಟೌಟ್: ಯಶಸ್ವಿ ಯುವಕ ಮಂಡಲದ ವತಿಯಿಂದ ಶುಕ್ರವಾರ ಕಲ್ಲುಗುಂಡಿಯ ಸರಕಾರಿ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಗಿದೆ.
ಕಳೆದ ಕೆಲವು ದಿನಗಳಿಂದ ಶಾಲೆಯ ಸುತ್ತಮುತ್ತ ಕಾಡು ಗಿಡಗಂಟಿಗಳು ಬೆಳೆದಿದ್ದು ಅವುಗಳನ್ನು ತೆಗೆದು ಶಾಲೆ ಮಕ್ಕಳಿಗೆ ಕ್ರೀಡಾಂಗಣದಲ್ಲಿ ಆಟವಾಡುವುದಕ್ಕೆ ಅನುಕೂಲ ಮಾಡಿಕೊಡುವುದು ಹಾಗೂ ಮಕ್ಕಳಲ್ಲಿ ಶುಚಿತ್ವದ ಬಗ್ಗೆ ಅರಿವು ಮೂಡಿಸುವುದು ನಮ್ಮ ಉದ್ದೇಶವಾಗಿದೆ ಎಂದು ಸುಧಾಕರ ಬಾಚಿಗದ್ದೆ ತಿಳಿಸಿದ್ದಾರೆ.



















