ನ್ಯೂಸ್ ನಾಟೌಟ್: ಪೊಲೀಸ್ ಪೇದೆಯೊಬ್ಬರು ಪೊಲೀಸ್ ಮೆಸ್ನಲ್ಲಿ ನೀಡಲಾದ ಆಹಾರ ಗುಣಮಟ್ಟದ್ದಲ್ಲ ಎಂದು ರಸ್ತೆಯ ಮೇಲೆ ನಿಂತು ಗಳಗಳನೇ ಅಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಉತ್ತರಪ್ರದೇಶದ ಕಾನ್ಸ್ಟೇಬಲ್ನನ್ನು ಮನೋಜ್ ಕುಮಾರ್ ಎಂದು ಗುರುತಿಸಲಾಗಿದೆ. ವೀಡಿಯೋದಲ್ಲಿ ಮನೋಜ್ ಕುಮಾರ್ ರೊಟ್ಟಿ, ದಾಲ್ ಹಾಗೂ ಅನ್ನವನ್ನು ತಟ್ಟೆಯನ್ನು ಹಿಡಿದು ಈ ಊಟವನ್ನು ಪ್ರಾಣಿಗಳು ಸಹ ತಿನ್ನುವುದಿಲ್ಲ ಎಂದು ರಸ್ತೆಯಲ್ಲಿ ಅಳುತ್ತಿದ್ದಾರೆ. ಅಲ್ಲಿದ್ದ ಹಿರಿಯ ಅಧಿಕಾರಿಯೊಬ್ಬರು ಮನೋಜ್ ಕುಮಾರ್ನನ್ನು ಮತ್ತೆ ಪೊಲೀಸ್ ಠಾಣೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಜೊತೆಗೆ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ.


















