ನ್ಯೂಸ್ ನಾಟೌಟ್: ಜಪಾನ್‌ನ ದೀರ್ಘಾವದಿಯ ಪ್ರಧಾನಿಯಾಗಿದ್ದ ಶಿಂಜೊ ಅಬೆ ಅವರಿಗೆ ಗುಂಡೇಟು ಬಿದ್ದಿದೆ ಎಂದು ಸರಕಾರದ ವಕ್ತಾರರು ಶುಕ್ರವಾರ ತಿಳಿಸಿದ್ದಾರೆ. ಆದರೆ, ಅವರು ಜೀವಂತವಿರುವ ಬಗ್ಗೆ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಭಾನುವಾರ ಜಪಾನ್ ನಲ್ಲಿ ಮೇಲ್ಮನೆ ಚುನಾವಣೆ ನಡೆಯಲಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಪಶ್ಚಿಮ ಜಪಾನ್ ನ ನಾರಾ ನಗರದಲ್ಲಿ ಆಯೋಜನೆಯಾಗಿದ್ದ ಸಮಾರಂಭದಲ್ಲಿ ಅಬೆ ಭಾಷಣ ಮಾಡುತ್ತಿದ್ದರು. ಆಗ ಗುಂಡಿನ ಸದ್ದು ಕೇಳಿಬಂದಿದೆ ಎಂದು ವರದಿಯಾಗಿದೆ. ಭಾಷಣ ಮಾಡುವಾಗ ಅವರ ಹಿಂದಿನಿಂದ ಬಂದ ವ್ಯಕ್ತಿ ಗುಂಡು ಹಾರಿಸಿದ್ದಾನೆ. ಎದೆಯ ಮೇಲೆ ಕೈಹಿಡಿದು ಅಬೆ ಕುಸಿದು ಬಿದ್ದಿದ್ದಾರೆ. ಅಬೆ ಅವರನ್ನು ಸುತ್ತುವರಿದ ಜನ ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಆಸ್ಪತ್ರೆ ಸಿಬ್ಬಂದಿ ಹೆಚ್ಚಿನ ಮಾಹಿತಿ ನೀಡಿಲ್ಲ‘ ಎಂದು ವರದಿಯಲ್ಲಿದೆ.


















