ನ್ಯೂಸ್ ನಾಟೌಟ್: ಕಾರು ಡಿಕ್ಕಿಯಾದ ಪರಿಣಾಮ ರಸ್ತೆದಾಟುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕುಶಾಲನಗರ ಸಮೀಪ ಬಸವನಹಳ್ಳಿ ಹೆದ್ದಾರಿಯಲ್ಲಿ ನಡೆದಿದೆ. ಅಂದಗೋವೆಯ ನಿವಾಸಿ ಲೋಕೇಶ್ (56) ಎಂಬುವವರೇ ಮೃತ ದುರ್ದೈವಿ. ಹೆದ್ದಾರಿ ದಾಟುತ್ತಿದ್ದ ಸಂದರ್ಭ ಅತಿವೇಗದಲ್ಲಿ ಬಂದ ಕಾರು ಡಿಕ್ಕಿಯಾದ ಪರಿಣಾಮ ಲೋಕೇಶ್ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟರು. ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದು, ಕುಶಾಲನಗರ ಪೊಲೀಸರು ಪತ್ತೆಕಾರ್ಯ ಚುರುಕುಗೊಳಿಸಿದ್ದಾರೆ.










