
ಸಂಪಾಜೆ: ಇಲ್ಲಿನ ಗಡಿಕ್ಕಲು ಸಮೀಪ ಕಾರು ಪಲ್ಟಿಯಾಗಿರುವ ಘಟನೆ ಇದೀಗ ನಡೆದಿದೆ. ಕಾರು ಸುಳ್ಯದಿಂದ ಮಡಿಕೇರಿ ಕಡೆಗೆ ತೆರಳುತ್ತಿತ್ತು ಎನ್ನಲಾಗಿದೆ. ಘಟನೆಯ ವೇಳೆ ಕಾರಿನಲ್ಲಿ ದಂಪತಿಗಳು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಅಲ್ಪ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಇಬ್ಬರೂ ಪಾರಾಗಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಇತ್ತೀಚೆಗೆ ಅದೇ ಜಾಗದಲ್ಲಿ ಅಪಘಾತ ನಡೆದು ಸರೋಜ್ ಕುಮಾರ್ ಎನ್ನುವ ವ್ಯಕ್ತಿ ನಿಧನರಾಗಿದ್ದರು. ಅದೇ ಸ್ಥಳದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಕೂಡ ಪಲ್ಟಿಯಾಗಿದ್ದನ್ನು ಸ್ಮರಿಸಬಹುದು.









