ಮಡಿಕೇರಿ: ದೇವರಕೋಲ ನಡೆಯುವ ಸಂದರ್ಭ ನಡೆದ ಕಲಹ ವಿಕೋಪಕ್ಕೆ ತಿರುಗಿ ಮೂವರು ಗಾಯಗೊಂಡಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ನಗರಳ್ಳಿ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ.
ಒಂದೇ ಕುಟುಂಬದ ಸದಸ್ಯರುಗಳಾದ ಜಿ.ಡಿ.ವೀರೇಶ, ಮಹೇಶ, ನಂದೀಶ ಹಾಗೂ ಚಂದ್ರಶೇಖರ್ ಗಾಯಗೊಂಡವರಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗುಂಡಿನ ದಾಳಿಗೆ ಮೂವರು ಗಾಯಗೊಂಡಿರುವುದಾಗಿ ಆರೋ ಪಿಸಲಾಗಿದೆ. ವ್ಯಕ್ತಿಯೋರ್ವ ಗುಂಡು ಹಾರಿಸಿದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಸೋ ಮವಾರ ಸಂಜೆ ನಡೆದಿದೆ. ನಗರಳ್ಳಿ ಗ್ರಾಮದಲ್ಲಿ 5 ಕುಟುಂಬಸ್ಥರು ಸೇರಿ 12 ವರ್ಷಗಳ ನಂತರ ಕೋಲ ಪೂಜೆ ನಡೆಸಿದ್ದಾರೆ. ಎರಡು ದಿನ ಪೂಜೆ ನಡೆದಿದ್ದು, ಇಂದು ಸಂಜೆ ಕ್ಷುಲ್ಲಕ ಕಾರಣಕ್ಕೆ ಕಲಹ ಏರ್ಪಟ್ಟಿದೆ ಎಂದು ಹೇಳಲಾಗಿದೆ. ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


















