ಮಂಗಳೂರು: ಬಲಿಪ ಪರಂಪರೆಯ ಕೊಂಡಿ ಅರ್ಧದಲ್ಲಿಯೇ ಕಳಚಿಕೊಂಡಿದೆ. ಮುಗ್ಧ, ಸರಳ, ಸಜ್ಜನ, ಸದ್ಗುಣ ಸಂಪನ್ನ ಬಲಿಪ ಪ್ರಸಾದ ಭಾಗವತರು ಕ್ಯಾನ್ಸರ್ ಆಸ್ಪತ್ರೆಯಲ್ಲಿ ಇಂದು ಸಂಜೆ ದೈವಾಧೀನರಾದರು. ಮೇರು ಭಾಗವತ, ಕಟೀಲು ಭ್ರಮರಾಂಬಿಕೆಯ ಆರಾಧಕ ಭಗವಂತನ ವರಪ್ರಸಾದ ಬಲಿಪರು ಕಳೆದ ಕೆಲವು ತಿಂಗಳಿನಿಂದ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಹಲವಾರು ಯಕ್ಷಗಾನ ಮೇಳದಲ್ಲಿ ತನ್ನ ವಿಶಿಷ್ಟವಾದ ಕಂಠ ಸಿರಿಯಿಂದ ಗಮನ ಸೆಳೆದಿದ್ದರು.










