ಕಾವು: ಈಶ್ವರಮಂಗಲದಲ್ಲಿ ಅಗ್ನಿ ದುರಂತವೊಂದು ಸಂಭವಿಸಿ ಭಾರಿ ನಷ್ಟವಾಗಿದೆ. ಇಲ್ಲಿನ ಹನುಮಗಿರಿ ಶ್ರೀ ಪಂಚಮುಖಿ ಕ್ಷೇತ್ರದ ಪಕ್ಕದಲ್ಲಿರುವ ಧನಂಜಯ ಗೌಡ ಅನ್ನುವವರ ಮಾಲೀಕತ್ವದ ಪಂಚಮುಖಿ ಆಂಜನೇಯ ಹಣ್ಣು ಕಾಯಿ ಮತ್ತು ಫ್ಯಾನ್ಸಿ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಇಂತಹ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ರಾತ್ರಿಯ ವೇಳೆ ಈ ಅವಘಡ ಸಂಭವಿಸಿದ್ದು ತಕ್ಷಣ ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.










