ಬೆಳ್ತಂಗಡಿ: ಇಲ್ಲಿನ ಬಸ್ ನಿಲ್ದಾಣದ ನಗರ ಪಂಚಾಯತ್ ಸಂಕೀರ್ಣದಲ್ಲಿನ ಜ್ಯೂಸ್ ಸೆಂಟರ್ ವೊಂದರಿಂದ ಮಾ.11 ರಂದು ರಾತ್ರಿ ಶಟರ್ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಕ್ಯಾಶ್ ಕೌಂಟರ್‌ನಲ್ಲಿದ್ದ ರೂ.50 ಸಾವಿರ ಮತ್ತು ಚಿಲ್ಲರೆ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಕಟ್ಟಡದ ಬಾಡಿಗೆ ನೀಡುವುದಕ್ಕಾಗಿ ಹಣವನ್ನು ಮಾಲೀಕರು ಡ್ರವರ್ ನಲ್ಲಿ ಇಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















