ನ್ಯೂಸ್ ನಾಟೌಟ್: ವರ್ಷಂ ಪ್ರತಿ ಅತ್ಯಂತ ಸಂಭ್ರಮ ವಿಜೃಂಭಣೆಯಿಂದ ನಡೆಯುವ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ಒತ್ತೆಕೋಲದ ಕೊಳ್ಳಿ ಕಡಿಯುವ ಕಾರ್ಯಕ್ರಮ ಮಾ. 14 ರಂದು ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಲ್ಲುಗುಂಡಿ ವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಹಲವಾರು ವರ್ಷಗಳ ಇತಿಹಾಸವಿದೆ. ಇನ್ನೇನು ಒತ್ತೆಕೋಲಕ್ಕೆ ಕೆಲವೇ ದಿನಗಳು ಬಾಕಿ ಇದೆ. ಇದೀಗ ಮೊದಲನೆ ಹಂತವಾಗಿ ಕೊಳ್ಳಿ ಕಡಿಯುವ ಮುಹೂರ್ತ ನಡೆಯುತ್ತದೆ . ಈ ಸೇವೆಯಲ್ಲಿ ಭಕ್ತಾಧಿಗಳು ಬಂದು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ದೈವದ ಅರಸಿನ ಪ್ರಸಾದ ಸ್ವೀಕರಿಸಿ ಕೃಪೆಗೆ ಪಾತ್ರರಾಗಬೇಕು ಎಂದು ಗೌರವಾಧ್ಯಕ್ಷ ರಾಜಾರಾಮ ಕೀಲಾರು , ಅಧ್ಯಕ್ಷ ಜಗದೀಶ್ ರೈ , ಮೊಕ್ತೇಸರರು ಕೆ . ಕರುಣಾಕರ ಮತ್ತು ಆಡಳಿತ ಮಂಡಳಿ ತಿಳಿಸಿದ್ದಾರೆ.


















