ನ್ಯೂಸ್ ನಾಟೌಟ್: ಅಬ್ಬಾಬ್ಬ ಈ ಸರ್ಪದ ವಿಡಿಯೋ ನೋಡಿದ್ರೆ ಎಂಥವರಾದರೂ ಬೆಚ್ಚಿ ಬೀಳಲೇಬೇಕು.ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ್ ನಂದಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕಿಂಗ್ ಕೋಬ್ರಾದ ಭಯಾನಕ ವೀಡಿಯೋವೊಂದು ಸಖತ್ ವೈರಲ್ ಆಗಿದೆ.
ಉದ್ದನೆಯ ಕೋಬ್ರಾವೊಂದು ಬಾನೆತ್ತರಕ್ಕೆ ಹೆಡೆಬಿಚ್ಚಿ ನಿಂತತಿದೆ. ಜಗತ್ತಿನ ಅತೀ ಉದ್ದದ ವಿಷಕಾರಿ ಹಾವು ಕಿಂಗ್‌ಕೋಬ್ರಾ, ವಾಸ್ತವವಾಗಿ ಅದು ಮನುಷ್ಯರು ವಾಸಿಸುವ ಪ್ರದೇಶದಿಂದ ಆದಷ್ಟು ದೂರ ಇರುತ್ತದೆ. ವಾಣಿಜ್ಯ ಮತ್ತು ಕೈಗಾರಿಕಾ ಪ್ರದೇಶಗಳಿಗೆ ಸ್ಥಳಾವಕಾಶ ಕಲ್ಪಿಸಲು ಹೆಚ್ಚು ಹೆಚ್ಚು ಕಾಡುಗಳನ್ನು ನಾಶ ಮಾಡುತ್ತಾ ಬಂದಂತೆ, ಕಾಡಿನಲ್ಲಿರುವ ಜೀವಿಗಳು ನಾಡಿನತ್ತ ಬರಲು ಆರಂಭಿಸಿವೆ. ಈಗ ಹೆಚ್ಚಾಗಿ ಚಿರತೆ, ಆನೆಗಳು ಕಾಡಿನಿಂದ ಆಹಾರವನ್ನರಸಿ ಊರಿಗೆ ಬರುವ ಸುದ್ದಿಯನ್ನು ಆಗಾಗ್ಗೆ ಕೇಳುತ್ತಿರುತ್ತೇವೆ.
ಇದೇ ರೀತಿ ಕಾಡಿನಲ್ಲಿ ಇರಬೇಕಾದ ಕಿಂಗ್ ಕೋಬ್ರಾವೊಂದು ತನ್ನ ಹೆಡೆಯನ್ನೆತ್ತಿ ಎತ್ತರಕ್ಕೆ ನಿಂತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ ನಂದಾ ಅವರು ಟೀಟರ್‌ನಲ್ಲಿ ಶೇರ್ ಮಾಡಿಕೊಂಡಿರುವ ಈ ವಿಡಿಯೋ ನೆಟ್ಟಿಗರಲ್ಲಿ ನಡುಕ ಹುಟ್ಟಿಸಿದೆ.


















