ನ್ಯೂಸ್ ನಾಟೌಟ್: ವಾಹನ ಚಲಾಯಿಸುವಾಗ ಇನ್ನೊಬ್ಬರಿಗೆ ತೊಂದರೆಯಾಗದಂತೆ ಜಾಗೃತೆಯಿಂದ ಹೋಗು ಎಂದು ತಿಳಿವಳಿಕೆ ಹೇಳಿದಾತನ ಮೇಲೆಯೇ ಟಿಪ್ಪರ್ ಚಲಾಯಿಸಿ ಕೊಲೆ ಮಾಡಿದ ಆರೋಪಿ ಕೋಟೆ ಬಾಗಿಲು ನಿವಾಸಿ, ಟಿಪ್ಪರ್ ಚಾಲಕ ಆರೀಸ್ ಎಂಬಾತನನ್ನು ಸೋಮವಾರ ಉಲಾಯಿಬೆಟ್ಟುವಿನಲ್ಲಿ ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ಕೋಟೆಬಾಗಿಲಿನ ನಿವಾಸಿ ಫಯಾಝ್ (61) ಎಂಬವರ ಮೇಲೆ ಟಪ್ಪರ್ ಚಲಾಯಿಸಿದ್ದು, ಗಂಭೀರ ಗಾಯಗೊಂಡ ಫಯಾಝ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟದ್ದರು. ನಾಪತ್ತೆಯಾಗಿದ್ದ ಟಿಪ್ಪರ್ ಚಾಲಕ ಆರೀಸ್‌ನ ಬಂಧನಕ್ಕೆ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದರು. ಆರೋಪಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.










