ನ್ಯೂಸ್ ನಾಟೌಟ್: ಚುನಾವಣೆ ಹತ್ತಿರ ಸಮೀಪಿಸುತ್ತಿರುವಂತೆ ರಾಜಕೀಯ ಪಕ್ಷಗಳ ನಾಟಕ ಶುರುವಾಗಿದೆ.
ವಿವಿಧ ರಾಜಕೀಯ ಪಕ್ಷಗಳು ಪೂರ್ವ ತಯಾರಿಯಾಗಿ ಮತ ಸೆಳೆಯವಿಕೆಗೆ ಮುಂದಾಗಿದೆ. ಇದೀಗ ಮೊದಲ ಸರದಿ ಬಿಜೆಪಿಯದ್ದಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಮುಸ್ಲಿಂ ಮತ ಓಲೈಕೆಗೆ ಬಿಜೆಪಿ ಕಸರತ್ತು ನಡೆಸಿರುವ ವಿಚಾರವೊಂದು ಹೊರಬಿದ್ದಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.
ಚುನಾವಣೆಯ ಸಂದರ್ಭದಲ್ಲಿ ಓಟಿಗಾಗಿ ನಮ್ಮ ನಾಯಕರು ಎಂತಹ ಮಟ್ಟಕ್ಕೆ ಬೇಕಾದರೂ ಇಳಿದು ಬಿಡುತ್ತಾರೆ ಅನ್ನುವುದು ಮತ್ತೊಮ್ಮೆ ನಿರೂಪಿತವಾಗಿದೆ. ಬಿಜೆಪಿ ಸಚಿವ ಎಂಟಿಬಿ ನಾಗರಾಜ್ ಕವ್ವಾಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾರೆ. ಮಾತ್ರವಲ್ಲ ಒಂದು ಹೆಜ್ಜೆ ಮುಂದು ಹೋಗಿ ಕವ್ವಾಲಿ ಹಾಡುಗಾರನ ಮೇಲೆ ಗರಿಗರಿ ನೋಟುಗಳ ಹಣದ ಸುರಿಮಳೆಯನ್ನು ಗೈದಿದ್ದಾರೆ. ಅಪ್ಪನ ಈ ಕೆಲಸದಲ್ಲಿ ಸಚಿವ ಎಂಟಿಬಿ ನಾಗರಾಜ್ ಪುತ್ರ ನಿತಿನ್ ಪುರುಷೋತ್ತಮ್ ಕೂಡ ಭಾಗಿಯಾಗಿದ್ದಾರೆ. ಬೆಂಗಳೂರಿನ ಹೊಸಕೋಟೆಯ ಚೆನ್ನಭೈರೇಗೌಡ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮ ಇಂತಹದ್ದೊಂದು ಘಟನೆ ನಡೆದಿದೆ. ಟೋಪಿ ಧರಿಸಿ ಉರ್ದುವಿನಲ್ಲೇ ಎಂಟಿಬಿ ಭಾಷಣ ಮಾಡಿದ್ದಾರೆ. ತಡರಾತ್ರಿಯ ವರೆಗೂ ಈ ಕಾರ್ಯಕ್ರಮ ನಡೆದಿತ್ತು ಅನ್ನುವುದು ವಿಶೇಷ.


















