ನ್ಯೂಸ್ ನಾಟೌಟ್ : 9 ನೇ ಆವೃತ್ತಿ ಬಿಗ್‌ಬಾಸ್ ಗೆದ್ದು ಲಕ್ಷಾಂತರ ಜನರ ಹೃದಯ ಸಿಂಹಾಸನದಲ್ಲಿ ಸ್ಥಾನ ಪಡೆದ ಕರಾವಳಿ ಹುಡುಗ ರೂಪೇಶ್ ಶೆಟ್ಟಿ ಭಾನುವಾರ ಮಂಗಳೂರಿಗೆ ಆಗಮಿಸಿದ್ದಾರೆ. ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಅವರನ್ನು ಕರೆದೊಯ್ಯಲಾಯಿತು.

ಈ ವೇಳೆ ಮಾತನಾಡಿದ ಅವರು, ನಾನು ತುಳು ನಾಡಿನವನಾಗಿ ನನಗೆ ತುಳುನಾಡಿನವರು ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ನಾನು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಇಲ್ಲಿಯ ತನಕ ರಾಜ್ಯಾದ್ಯಂತ ಎಲ್ಲರೂ ಬೆಂಬಲ ಸೂಚಿಸಿದ್ದು, ಒಟಿಟಿ ಮತ್ತು ಪರದೆಯ ಮೇಲೆ ಅತಿ ಹೆಚ್ಚು ಮತ ಸಿಕ್ಕಿರುವುದೇ ನನಗೆ. ಇಲ್ಲಿಯ ತನಕ ಯಾರೂ ಈ ದಾಖಲೆಯನ್ನು ಮಾಡಿಲ್ಲ. ಜಿಲ್ಲೆಯಲ್ಲಿ ಇಲ್ಲಿಯ ಜನರ ಬೆಂಬಲ ಅತಿ ಹೆಚ್ಚಾಗಿ ಸಿಕ್ಕಿದೆ ಎಂದು ತಿಳಿಸಿದರು. ಗೆದ್ದ ಹಣದಲ್ಲಿ ಶೇ.50 ಮಾತ್ರ ಹಣವನ್ನು ನಾನು ಉಪಯೋಗಿಸುತ್ತೇನ. ಉಳಿದ ಹಣದಲ್ಲಿ ಈಗಾಗಲೇ ಮೂವರನ್ನು ಗುರುತಿಸಿದ್ದು, ಅವರಿಗೆ ಸೂಕ್ತವಾದ ಮನೆ ನಿರ್ಮಿಸಿಕೊಡುತ್ತೇನೆ. ಉಳಿದಂತೆ ತುಳು ಮತ್ತು ಕನ್ನಡ ಕಲಾವಿದರಿಗೆ ಸ್ವಲ್ಪ ಸಹಾಯ ಮಾಡಬೇಕೆಂದಿದ್ದೇನೆ. ನಾನೇ ನಿರ್ಮಾಪಕನಾಗಿ ತಯಾರಿಸಿದ ಸರ್ಕಸ್ ತುಳು ಸಿನಿಮಾ ಸಿದ್ದವಾಗಿದೆ. ಅದನ್ನು ಆದಷ್ಟು ಬೇಗ ಬಿಡುಗಡೆ ಮಾಡಲಿದ್ದೇನೆ. ಬಿಗ್‌ಬಾಸ್ ಗೆಲುವಿನ ಬಳಿಕೆ ೪-೫ ಸಿನಿಮಾಗಳ ಚಿತ್ರಿಕರಣವಾಗುತ್ತಿದೆ ಎಂದರು.


















