ನ್ಯೂಸ್ ನಾಟೌಟ್: ಶಾಲೆಗಳಲ್ಲಿ ಶಿಕ್ಷಕರು, ಸಿಬ್ಬಂದಿ ಅಪ್ರಾಪ್ತ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿ ಸಿಕ್ಕಿಬಿದ್ದ ಅದೆಷ್ಟೋ ಪ್ರಕರಣವನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಸರಕಾರಿ ಶಾಲೆ ಶಿಕ್ಷಕ ಪಾಠ ಹೇಳಿಕೊಡು ಅಂದ್ರೆ ಪ್ರೇಮ ಪತ್ರದ ಪಾಠವನ್ನೇ ಅಪ್ರಾಪ್ತ ಹುಡುಗಿಗೆ ಹೇಳಿಕೊಟ್ಟು ಇದೀಗ ಸಿಕ್ಕಿಬಿದ್ದಿದ್ದಾನೆ.
ಈ ಘಟನೆ ಉತ್ತರ ಪ್ರದೇಶದ ಸರ್ದಾರ್ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಗಳು ನೀಡಿದ ದೂರಿನ ಆಧಾರದಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನೂ ಪ್ರೇಮ ಅನ್ನುವುದು ಏನು ಅರ್ಥವಾಗದ ವಯಸ್ಸಿನಲ್ಲಿರುವ ಬಾಲಕಿಗೆ 47 ವರ್ಷದ ಟೀಚರ್ ಪ್ರೇಮ ಪತ್ರ ಬರೆದಿದ್ದಾನೆ. ನಿನ್ನನ್ನು ನನಗೆ ನೋಡದೆ ಇರಲು ಆಗುವುದಿಲ್ಲ. ರಜೆಯಲ್ಲಿ ನೀನು ಇದ್ದ ದಿನವೆಲ್ಲ ನನಗೆ ನಿನ್ನದೇ ನೆನಪು. ನೀನು ನನ್ನನ್ನು ನಿಜವಾಗಿಯೂ ಪ್ರೀತಿಸುವುದಾದರೆ ನನ್ನ ಬಳಿ ಬರುತ್ತೀಯ. ನಿನಗೆ ಸಮಯ ಸಿಕ್ಕಿದರೆ ನನಗೆ ಕರೆ ಮಾಡಲು ಬರೆಯಬೇಡ ಎಂದು ನೀಚ ಗುರು ಪತ್ರದಲ್ಲಿ ಬರೆದಿದ್ದಾನೆ. ಈ ಪ್ರಕರಣವನ್ನು ಎಸ್‌ಪಿ ಅನುಪಮ್ ಸಿಂಗ್ ಗಂಭೀರವಾಗಿ ತೆಗೆದುಕೊಂಡು ತನಿಖೆ ಆರಂಭಿಸಿದ್ದಾರೆ.


















