ನ್ಯೂಸ್ ನಾಟೌಟ್ : ಹಿಂದೂ -ಮುಸ್ಲಿಂ ಕೋಮು ಸಂಘರ್ಷದ ಅಹಿತಕರ ಘಟನೆಗಳು ಕರಾವಳಿಯಲ್ಲಿ ಆಗಾಗ್ಗೆ ಕಂಡು ಬರುತ್ತಿದೆ. ಈ ನಡುವೆ ಮುಸ್ಲಿಂ ವ್ಯಕ್ತಿಯೊಬ್ಬರು ಅಯ್ಯಪ್ಪ ಮಾಲಾಧಾರಿ ಪುಟ್ಟ ಬಾಲಕನ ಕೈ ಹಿಡಿದು ರಸ್ತೆ ದಾಟಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಕಲ್ಲುಗುಂಡಿ ಎಂಬಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆಯ ಸಂದೇಶ ಸಾರಿದ ವಿಶೇಷ ಘಟನೆ ನಡೆದಿದೆ. ಇಬ್ರಾಹಿಂ ಮೈಲಿಕಲ್ಲು ಅನ್ನುವ ಹಿರಿಯ ಮುಸ್ಲಿಂ ವ್ಯಕ್ತಿಯ ಅಂಗಡಿಯಲ್ಲಿ ಮಾಲಾಧಾರಿ ಬಾಲಕನ ತಂದೆ ಕೆಲಸ ಮಾಡುತ್ತಿದ್ದು ಬಾಲಕನಿಗೆ ಹಣ್ಣು ನೀಡುವುದಕ್ಕಾಗಿ ಅಂಗಡಿಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿದು ಬಂದಿದೆ. ಇಬ್ರಾಹಿಂ ಅವರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.



















E Ghatane Akshmika . Hiriya Vyakthi mathu Putta Baalaka Eradu bere bere dharmiyaru .ADARE Idakke Heluvudu MAANAVA DHARMA antha .idanne KUVEMPU Heliruva Sandesha VISHWA MANAVARAGONA……@Thirumala Sona @