ನ್ಯೂಸ್ ನಾಟೌಟ್: ಕೆಲವರು ಬೆಳಗ್ಗೆ ಎದ್ದ ತಕ್ಷಣ ಕಾಫಿ ಕುಡಿಯೋದನ್ನು ರೂಢಿ ಮಾಡಿಕೊಂಡಿರುತ್ತಾರೆ. ಬೆಳಗಿನ ಸಮಯದಲ್ಲಿ ಎದ್ದ ತಕ್ಷಣ ಕಾಫಿ ಕುಡಿಯುವವರ ದೇಹದಲ್ಲಿ ಮೆಟಬಾಲಿಸಂ ಸರಿಯಾಗಿ ನಡೆಯುವುದಿಲ್ಲ ಮತ್ತು ನಿದ್ರಾಹೀನತೆಯ ಸಮಸ್ಯೆ ಎದುರಾಗುತ್ತದೆ. ಈ ಎಲ್ಲಾ ಕಾರಣದಿಂದ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ. ರಕ್ತದಲ್ಲಿನ ಗ್ಲುಕೋಸ್ ಪ್ರಮಾಣದ ಮೇಲೆ ಇದು ಪ್ರಭಾವ ಬೀರುತ್ತದೆ ಎಂದು ತಿಳಿದು ಬಂದಿದೆ.
ಸಂಶೋಧನೆಯ ಸತ್ಯ:
ಅಧ್ಯಯನ ತಂಡ ಸುಮಾರು 29 ಆರೋಗ್ಯಕರ ಪುರುಷರನ್ನು ಮತ್ತು ಮಹಿಳೆಯರನ್ನು ಸಂಶೋಧನೆಗೆ ಒಳಪಡಿಸಿ ಮೂರು ದಿನಗಳ ಕಾಲ ನಿದ್ರಾಹೀನತೆ ಉಂಟಾಗುವಂತೆ ಮಾಡಿ ಬೆಳಗಿನ ಸಮಯದಲ್ಲಿ ರಕ್ತದಲ್ಲಿನ ಸಕ್ಕರೆ ಪರೀಕ್ಷೆ ಮಾಡಿದರು.ಇಲ್ಲಿ ತಿಳಿದು ಬಂದ ವಿಚಾರವೆಂದರೆ ಯಾರು ಬೆಳಗ್ಗೆ ಬೇಗ ಎದ್ದಿದ್ದರು ಹಾಗೂ ಅವರಲ್ಲಿ ಯಾರು ಬೆಡ್ ಕಾಫಿ ಮತ್ತು ಬ್ಲಾಕ್ ಕಾಫಿ ಕುಡಿದಿದ್ದರು ಅವರಲ್ಲಿ ಉಂಟಾದ ವ್ಯತ್ಯಾಸವನ್ನು ಕಂಡು ಹಿಡಿಯಲಾಯಿತು . ಬೆಡ್ ಕಾಫಿ ಕುಡಿದ ಜನರಲ್ಲಿ ಬ್ಲಡ್ ಶುಗರ್ ಏರಿಕೆ ಕಂಡು ಬಂದಿದ್ದು ಬ್ಲಾಕ್ ಕಾಫಿ ಕುಡಿದವರಲ್ಲಿ ನಾರ್ಮಲ್ ಲೆವೆಲ್ ಶುಗರ್ ಇದ್ದ ಬಗ್ಗೆ ಮಾಹಿತಿ ಸಿಕ್ಕಿತು.
ಯಾರು ತಾವು ತಿಂಡಿ ತಿನ್ನುವುದಕ್ಕೆ ಮುಂಚೆ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ ಅಂತಹವರಿಗೆ ನಕಾರಾತ್ಮಕ ಮೆಟಬಾಲಿಸಂ ಪ್ರಭಾವ ಇರುತ್ತದೆ.ಇದರ ಜೊತೆಗೆ ನಿದ್ರಾಹೀನತೆ ಕೂಡ ಇದ್ದರೆ ಅದರಿಂದ ಬೇರೆ ಬಗೆಯ ಆರೋಗ್ಯ ತೊಂದರೆಗಳು ಎದುರಾಗುತ್ತದೆ ಜತೆಗೆ ಡಯಾಬಿಟಿಸ್ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳುತ್ತಾರೆ.


















