ನ್ಯೂಸ್ ನಾಟೌಟ್ : ಇಂದು ಜಗತ್ತು ಅತ್ಯಂತ ವೇಗವಾಗಿ ಓಡುತ್ತಿದೆ. ಸ್ಮಾರ್ಟ್ ಫೋನ್ ಕಾಲದಲ್ಲಿ ಜನರ ಯೋಚನೆ ಆಲೋಚನೆ ಬದಲಾಗಿದೆ. ಇಂದು ಬ್ಯಾಂಕ್ ನಲ್ಲಿ ಗಂಟೆಗಟ್ಟಲೆ ಹಣಕ್ಕಾಗಿ ಕ್ಯೂ ನಿಲ್ಲುವ ಸನ್ನಿವೇಶ ಇಲ್ಲ. ನೀವು ಕುಳಿತಲ್ಲಿಂದಲೇ ನೇರವಾಗಿ ಫೋನ್ ನಿಂದಲೇ ಹಣವನ್ನು ಯಾರಿಗೆ ಬೇಕಾದರೂ ಕಳಿಸಬಹುದು. ಈ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್ ಫೋನ್‌ನಲ್ಲೇ ಬ್ಯಾಂಕ್ ಇದೆ. ಅಪ್ಪಿ ತಪ್ಪಿ ಈ ಬ್ಯಾಂಕ್ ಯಾರದ್ದಾದರೂ ಕೈ ಸೇರಿದರೆ ದುರುಪಯೋಗ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಫೋನ್ ಕಳೆದು ಹೋದರೆ ಅಥವಾ ಫೋನ್ ಇಲ್ಲದೇ ಫೋನ್ ಪೇ ಡಿಲಿಟ್ ಮಾಡಬೇಕಾಗಿದ್ದರೆ ಏನು ಮಾಡಬೇಕು? ಕೂಡಲೇ ಮೊದಲು ನಿಮ್ಮ ಯುಪಿಐ ಅಕೌಂಟ್ ಅನ್ನು ಬ್ಲಾಕ್ ಮಾಡುವ ಸುಲಭ ವಿಧಾನ ಇಲ್ಲಿದೆ.
ಪೇಟಿಯಂ ಅಕೌಂಟ್ ಬ್ಲಾಕ್ ಮಾಡುವುದು ಹೇಗೆ ?
-ಮೊದಲಿಗೆ Paytm ಪೇಮೆಂಟ್ಸ್ ಬ್ಯಾಂಕ್ ಸಹಾಯವಾಣಿ 01204456456 ಗೆ ಕರೆ ಮಾಡಿ.
-ಇದರಲ್ಲಿ “ಕಳೆದುಹೋದ ಫೋನ್” ಆಯ್ಕೆಯನ್ನು ಆರಿಸಿ.
-ನಂತರ “ಬೇರೆ ಸಂಖ್ಯೆಯನ್ನು ನಮೂದಿಸಿ” ಆಯ್ಕೆ ಮಾಡಿ ಮತ್ತು ನಿಮ್ಮ ಕಳೆದುಹೋದ ಫೋನ್ ಸಂಖ್ಯೆಯನ್ನು ಟೈಪ್ ಮಾಡಿ.
-ಈಗ ಎಲ್ಲ ಡಿವೈಸ್ ಅನ್ನು ಲಾಗ್ ಔಟ್ ಮಾಡುವ ಆಯ್ಕೆ ಒತ್ತಿ.
-ಹಾಗೆಯೆ Paytm ವೆಬ್‌ಸೈಟ್ ಹೋಗಿ ಮತ್ತು 24×7 ಸಹಾಯವನ್ನು ಆಯ್ಕೆ ಮಾಡಿ.
-‘Report a Fraud’ ಆಯ್ಕೆಮಾಡಿ ಮತ್ತು ಅಲ್ಲಿ ಕಾಣಿಸುವ ಕ್ಯಾಟಗರಿಯನ್ನು ಸೆಲೆಕ್ಟ್ ಮಾಡಿರಿ.
-ಈಗ ಪುಟದ ಕೆಳಭಾಗದಲ್ಲಿ ಲಭ್ಯವಿರುವ ‘Message Us’ ಎಂಬ ಬಟನ್ ಕ್ಲಿಕ್ ಮಾಡಿ.
-ಇಲ್ಲಿ ನೀವು, ಇದು ನನ್ನದೇ ಪೇಟಿಯಂ ಖಾತೆ ಎಂಬುದಕ್ಕೆ ಪುರಾವೆಯನ್ನು ನೀಡಬೇಕು. ಅದು Paytm ಖಾತೆಯ
-ವಹಿವಾಟುಗಳೊಂದಿಗೆ ನಡೆದ ಡೆಬಿಟ್/ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಆಗಿರಬಹುದು ಅಥವಾ Paytm ಖಾತೆಯ
-ವಹಿವಾಟಿಗೆ ದೃಢೀಕರಣ ಇಮೇಲ್ ಅಥವಾ SMS ಆಗಿರಬಹುದು.
-ಬಳಿಕ ನೀವು ದೃಢೀಕರಣ ಸಂದೇಶವನ್ನು ಪಡೆಯುತ್ತೀರಿ. ಹಾಗೂ Paytm ನಿಮ್ಮ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸುತ್ತದೆ.
ಗೂಗಲ್ ಪೇ ಅಕೌಂಟು ಬ್ಲಾಕ್ ಮಾಡುವುದು ಹೇಗೆ ?
-ಗೂಗಲ್ ಪೇ ಬಳಕೆದಾರರು 18004190157ಗೆ ಕರೆ ಮಾಡಿ.
-ಇದು ಕಸ್ಟಮರ್ ಸರ್ವಿಸ್ ನಂಬರ್ ಆಗಿದ್ದು ಅವರು ಸಲಹೆ ನೀಡಿದ ರೀತಿ ನಡೆದುಕೊಳ್ಳಬೇಕು.
ಫೋನ್ ಪೇ ಅಕೌಂಟ್ ಬ್ಲಾಕ್ ಮಾಡುವುದು ಹೇಗೆ ?
-ಫೋನ್ ಪೇ ಬಳಕೆದಾರರು 08068727374 ಅಥವಾ 02268727374 ನಂಬರ್ಗೆ ಕರೆ ಮಾಡಿ.
-ಅಲ್ಲಿ ನಿಮಗೆ ಸಂಬಂಧಿಸಿದ ನಂಬರ್ ಅನ್ನು ಆಯ್ಕೆ ಮಾಡಿ.
-ಬಳಿಕ ಖಚಿತ ಪಡಿಸಿಕೊಳ್ಳಲು ನಿಮ್ಮ ಫೋನ್ ನಂಬರ್ ಗೆ OTP ಸೆಂಡ್ ಆಗುತ್ತದೆ.
-ಆಗ ನಾನು ಯಾವುದೇ OTP ಸ್ವೀಕರಿಸಿಲ್ಲ ಎಂಬ ಆಯ್ಕೆಯನ್ನು ಒತ್ತಿರಿ.
-ಸಿಮ್ ಕಳೆದು ಹೋಗಿದೆ ಅಥವಾ ಮೊಬೈಲ್ ಕಳೆದು ಹೋಗಿದೆ ಎಂಬ ಆಯ್ಕೆ ಸೆಲೆಕ್ಟ್ ಮಾಡಿ.
-ನಂತರ ನಿಮ್ಮ ಫೋನ್ ನಂಬರ್, ಇ–ಮೇಲ್, ವಿಳಾಸ, ಕೊನೆಯ ಪೇಮೆಂಟ್ ಕುರಿತ ಮಾಹಿತಿ ಸೇರಿದಂತೆ ಕೆಲ ದಾಖಲಾತಿ ನೀಡಿದ ಬಳಿಕ ಫೋನ್ ಪೇ ಅಕೌಂಟ್ ಬ್ಲಾಕ್ ಆಗುತ್ತದೆ.


















